ರಜನೀಕಾಂತ್ ರನ್ನು ಬೀಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್!

ಭಾನುವಾರ, 30 ಡಿಸೆಂಬರ್ 2018 (06:20 IST)
ಮುಂಬೈ: ಕೆಜಿಎಫ್ ಎಂಬ ಕನ್ನಡ ಚಿತ್ರ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಕಮಾಯಿ ಮಾಡುತ್ತಿದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಹಿಂದಿಯಲ್ಲಿ ಹೊಸ ದಾಖಲೆಯೊಂದನ್ನು ಮಾಡಿದೆ.


ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ತಮಿಳು ಸಿನಿಮಾ ರೋಬೋಟ್ ಹಿಂದಿಯಲ್ಲಿ ಮಾಡಿದ್ದ ಗಲ್ಲಾಪೆಟ್ಟಿಗೆ ದಾಖಲೆಯನ್ನು ಇದೀಗ ಕೆಜಿಎಫ್ ಹಿಂದಿಕ್ಕಿದೆ. ಹಿಂದಿಗೆ ಡಬ್ ಆದ ಸಿನಿಮಾವೊಂದು ಮಾಡಿದ ಗರಿಷ್ಠ ಹಣ ಗಳಿಕೆ ಟಾಪ್ 5 ಸಿನಿಮಾ ಪಟ್ಟಿಯಲ್ಲಿ ರೋಬೋಟ್ ಸಿನಿಮಾವನ್ನು ಈಗ ಕೆಜಿಎಫ್ ಹಿಂದಿಕ್ಕಿದೆ.

ಈಗಾಗಲೇ ಮಹಾರಷ್ಟ್ರದಲ್ಲಿ ಈ ಸಿನಿಮಾ ಹಿಟ್ ಸಿನಿಮಾ ಪಟ್ಟಿಗೆ ಸೇರ್ಪಡೆಯಾಗಿದೆ. ಇದುವರೆಗೆ ಕೆಜಿಎಫ್ ಹಿಂದಿಯಲ್ಲಿ ಸುಮಾರು 24 ಕೋಟಿ ರೂ.ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಇದು ಕನ್ನಡ ಸಿನಿಮಾವೊಂದರ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆ ಸಂಭ್ರಮದಲ್ಲಿ ಪ್ರಭಾಸ್-ಅನುಷ್ಕಾ ಜೋಡಿ!