Publish Date: Sat, 29 Dec 2018 (10:18 IST)
Updated Date: Sat, 29 Dec 2018 (10:32 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಈಗ ಎಲ್ಲೆಡೆ ಹವಾ ಎಬ್ಬಿಸುತ್ತಿದೆ. ಚಿತ್ರಮಂದಿರಗಳೂ ಭರ್ತಿಯಾಗಿವೆ. ಈ ನಡುವೆ ನಟಿ ಅಮೂಲ್ಯ ಕೆಜಿಎಫ್ ನೋಡಿದ್ದಾರೆ. ಆದರೆ ಅದಕ್ಕಾಗಿ ಅವರು ಖರೀದಿಸಿದ ಟಿಕೆಟ್ ಗಳೆಷ್ಟು ಗೊತ್ತಾ?!
ಅಮೂಲ್ಯ ಸುಮಾರು 25 ಟಿಕೆಟ್ ಖರೀದಿಸಿ ತಮ್ಮ ಇಡೀ ಕುಟುಂಬದವರನ್ನೂ ಜತೆಗೆ ಕರೆದೊಯ್ದು ಸಿನಿಮಾ ನೋಡಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಪಿವಿಆರ್ ಒರಿಯಾನ್ ಮಾಲ್ ನಲ್ಲಿ ಅಮೂಲ್ಯ ಕುಟುಂಬ ಸಮೇತ ಕೆಜಿಎಫ್ ವೀಕ್ಷಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅಮೂಲ್ಯ ಇದೇ ಮೊದಲ ಬಾರಿಗೆ ನನ್ನ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದೆ. ರಾಕಿ ಬಾಯ್ ಪ್ರತೀ ಫ್ರೇಮ್ ನಲ್ಲೂ ರಾಕಿಂಗ್..ಕನ್ನಡ ಸಿನಿಮಾವನ್ನು ಮತ್ತೊಂದು ಲೆವೆಲ್ ಗೆ ಎತ್ತಿದ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಅಮೂಲ್ಯ ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ