ಬೆಂಗಳೂರು: ಕೆಜಿಎಫ್ ಸಿನಿಮಾವನ್ನು ತೆಲುಗು ಭಾಷೆಯಲ್ಲಿ ನೋಡಿದ ಖ್ಯಾತ ನಟರೊಬ್ಬರು ರಾಕಿಂಗ್ ಸ್ಟಾರ್ ಯಶ್ ರನ್ನು ತೆಲುಗು ಸಿನಿಮಾ ಇಂಡಸ್ಟ್ರಿಗೆ ಬರುವಂತೆ ಆಹ್ವಾನವಿತ್ತಿದ್ದಾರೆ.
ತೆಲುಗಿನ ಖ್ಯಾತ ನಟ ನಿತಿನ್ ರಾಕಿಂಗ್ ಸ್ಟಾರ್ ಗೆ ಈ ಆಹ್ವಾನವಿತ್ತಿದ್ದಾರೆ. ಕೆಜಿಎಫ್ ಕನ್ನಡ ನಂತರ ತೆಲುಗಿನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಈ ಸಿನಿಮಾ ನೋಡಿದ ನಿತಿನ್ ಟ್ವಿಟರ್ ನಲ್ಲಿ ಯಶ್ ಗೆ ಶುಭ ಕೋರಿದ್ದಾರೆ.
‘ಕೆಜಿಎಫ್ ನೋಡಿದೆ. ಅದ್ಭುತ ದೃಶ್ಯ, ಹಿನ್ನಲೆ ಸಂಗೀತ. ನಿರ್ದೇಶಕ ಪ್ರಶಾಂತ್ ಅವರಿಗೆ ನನ್ನ ನಮನಗಳು. ನಿಮ್ಮ ಕೆಲಸ ನನಗೆ ಇಷ್ಟವಾಯಿತು ಮತ್ತು ಯಶ್ ನಿಮ್ಮದು ರಾಕಿಂಗ್ ಪರ್ಫಾರ್ಮೆನ್ಸ್. ತೆಲುಗು ಸಿನಿಮಾ ಇಂಡಸ್ಟ್ರಿಗೆ ನಿಮಗೆ ಸ್ವಾಗತ. ದ್ವಿತೀಯ ಭಾಗಕ್ಕಾಗಿ ಕಾಯುತ್ತಿದ್ದೇನೆ’ ಎಂದು ನಿತಿನ್ ಬರೆದುಕೊಂಡಿದ್ದಾರೆ. ಈಗಾಗಲೇ ಪ್ರಭಾಸ್, ರಾಜಮೌಳಿ ಜತೆಗೆ ಯಶ್ ಸಿನಿಮಾ ಮಾಡುತ್ತಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ ಕ್ರೇಜ್ ನೋಡಿದರೆ ಮುಂದೊಂದು ದಿನ ಇದು ನಿಜವಾದರೂ ಅಚ್ಚರಿಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ