Publish Date: Wed, 26 Dec 2018 (09:18 IST)
Updated Date: Wed, 26 Dec 2018 (09:19 IST)
ಬೆಂಗಳೂರು: ಬಾಲಿವುಡ್ ನ ಬಾದ್ ಶಹಾ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರವನ್ನೂ ಹಿಂದಿಕ್ಕಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಮಾಡಿದ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು ಗೊತ್ತಾ?
‘ನಮ್ಮ ಸಿನಿಮಾ ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದೆ ಎಂದು ನಾನು ಹೇಳಲಾರೆ. ಎಲ್ಲಾ ಸಿನಿಮಾಗಳೂ ಚೆನ್ನಾಗಿ ಓಡಲಿ. ಆದರೆ ಉತ್ತರ ಭಾರತದಲ್ಲಿ ಜನರಿಗೆ ನಾನು ಯಾರೂಂತನೇ ಗೊತ್ತಿಲ್ಲ. ಹಾಗಿದ್ದರೂ ನಾನು ತೆರೆ ಮೇಲೆ ಬರುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದಾರೆ. ಅದೇ ನನಗೆ ದೊಡ್ಡ ಗೆಲುವು’ ಎಂದು ರಾಕಿಂಗ್ ಸ್ಟಾರ್ ಹೇಳಿಕೊಂಡಿದ್ದಾರೆ.
ಇನ್ನು ಕೆಜಿಎಫ್ ಮೂಲಕ ಜಗತ್ತೇ ನಮ್ಮ ಕನ್ನಡ ಸಿನಿಮಾ ಕಡೆಗೆ ನೋಡುವಂತೆ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಯಶ್ ಹೇಳಿಕೊಂಡಿದ್ದಾರೆ. ಇದುವರೆಗೆ ನಮಗೆ ಸಿಗಬೇಕಿದ್ದ ಗೌರವ ಈಗ ಸಿಗುತ್ತಿದೆ ಎಂದು ಯಶ್ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ