ಶಾರುಖ್ ಖಾನ್ ಬಳಿಯಿರುವ ದುಬಾರಿ ವಸ್ತು ಯಾವುದು ಮತ್ತು ಅದರ ಬೆಲೆ ಎಷ್ಟು ಗೊತ್ತಾ?!

ಮಂಗಳವಾರ, 1 ಜನವರಿ 2019 (09:40 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ವಿಶ್ವದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರ ಬಳಿ ಇರುವ ಮೋಸ್ಟ್ ಕಾಸ್ಟ್ಲೀ ಐಟಂ ಯಾವುದು ಗೊತ್ತಾ?


ಜೀರೋ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರೊಬ್ಬರು ಅವರಿಗೆ ಈ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಶಾರುಖ್ ತಮ್ಮ ಮನೆ ಎಂದಿದ್ದಾರೆ. ಮುಂಬೈಯಲ್ಲಿರುವ ಶಾರುಖ್ ಬಂಗಲೆ ಮನ್ನತ್ ಬೆಲೆ ಸುಮಾರು 200 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಆ ಮನೆ ಖರೀದಿ ಹಿಂದಿನ ರಹಸ್ಯವನ್ನೂ ಅವರು ಬಿಡಿಸಿದ್ದಾರೆ. ‘ನಾನು ದೆಹಲಿಯಿಂದ ಬಂದವನು. ಇಲ್ಲಿ ಬಂಗಲೆಯಲ್ಲಿ ಇರುವುದೇ ಪ್ರತಿಷ್ಠೆಯ ವಿಚಾರ. ಗೌರಿಯನ್ನು ಮದುವೆಯಾದಾಗ ನಾನು ಮುಂಬೈನಲ್ಲಿ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದೆ. ಆಗ ನನ್ನ ಅತ್ತೆ ನೀನು ಚಿಕ್ಕಮನೆಯಲ್ಲಿ ಯಾಕೆ ವಾಸವಾಗಿದ್ದೆ ಎಂದು ಕೇಳುತ್ತಿದ್ದರು. ಅದಾದ ಮೇಲೆ ನಾನು ಮನ್ನತ್ ಖರೀದಿ ಮಾಡಿದೆ. ನನ್ನ ಪ್ರಕಾರ ನನ್ನ ಬಳಿಯಿರುವ ದುಬಾರಿ ವಸ್ತು ಎಂದರೆ ಇದುವೇ’ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೊಸ ವರ್ಷದ ಮೊದಲ ದಿನ ಪ್ರಕಾಶ್ ರೈ ಕಡೆಯಿಂದ ಬಂದ ಹೊಸ ಸುದ್ದಿ