Publish Date: Tue, 01 Jan 2019 (08:57 IST)
Updated Date: Tue, 01 Jan 2019 (09:02 IST)
ಬೆಂಗಳೂರು: ಇಷ್ಟು ದಿನ ಜಸ್ಟ್ ಆಸ್ಕಿಂಗ್ ಮೂವ್ ಮೆಂಟ್ ಮೂಲಕ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶ್ನೆ ಮಾಡುತ್ತಿದ್ದ ಬಹುಭಾಷಾ ತಾರೆ ಪ್ರಕಾಶ್ ರೈ ಇದೀಗ ಅಧಿಕೃತವಾಗಿ ರಾಜಕೀಯಕ್ಕೆ ಇಳಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಹೊಸ ವರ್ಷದ ಮೊದಲ ದಿನದಂದು ಪ್ರಕಾಶ್ ರೈ ಈ ಘೋಷಣೆ ಮಾಡಿರುವುದು ವಿಶೇಷ. ಎಲ್ಲರಿಗೂ ಶುಭ ಕೋರಿದ ಪ್ರಕಾಶ್ ರೈ ಹೊಸ ವರ್ಷದ ಮೊದಲ ದಿನದಂದು ತಾವು 2019 ನೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಅಷ್ಟೇ ಅಲ್ಲ, ತಾವು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಅಬ್ ಕೀ ಬಾರ್ ಜನತಾ ಕೀ ಸರ್ಕಾರ್ ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ.