ಹೈದರಾಬಾದ್: 2007-08 ನೇ ಸಾಲಿನಲ್ಲಿ ಸೇವಾ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ತಪ್ಪಿಗೆ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಎರಡು ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
									
										
								
																	
ಮಹೇಶ್ ಬಾಬುಗೆ ಸೇರಿದ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳ ಖಾತೆಗಳನ್ನು ಅಧಿಕಾರಿಗಳು ವಶಪಡಿಸಿದ್ದಾರೆ. ಮಹೇಶ್ ಬಾಬು ಈ ಸಾಲಿನಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರು.
									
			
			 
 			
 
 			
			                     
							
							
			        							
								
																	ಈಗ ಅದರ ಬಡ್ಡಿ, ದಂಡ ಎಲ್ಲಾ ಸೇರಿ ಸುಮಾರು 73 ಲಕ್ಷ ರೂ. ಅವರು ಪಾವತಿಸಬೇಕಿದೆ. ಆದರೆ ಅವರು ಪಾವತಿಸದೇ ಇರುವ ಕಾರಣಕ್ಕೆ ಅವರ ಎರಡು ಬ್ಯಾಂಕ್ ಖಾತೆಗಳನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ಇದರ ಪೈಕಿ ಒಂದು ಖಾತೆಯಿಂದ 42 ಲಕ್ಷ ರೂ. ವಶಪಡಿಸಿದ್ದಾರೆ. ಉಳಿದ ಹಣವನ್ನು ಐಸಿಐಸಿಐ ಬ್ಯಾಂಕ್ ನಿಂದ ವಶಪಡಿಸಿಕೊಳ್ಳಬೇಕಾಗಿದೆ. ಒಂದು ವೇಳೆ ಬ್ಯಾಂಕ್ ಪಾವತಿಸದೇ ಇದ್ದರೆ ತಕ್ಕ ಕ್ರಮ ಕೈಗೊಳ್ಳಬೇಕಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ದಂಡ ವಸೂಲಾತಿ ನಂತರವೇ ಈ ಎರಡೂ ಬ್ಯಾಂಕ್ ಖಾತೆಗಳು ಮಹೇಶ್ ಬಾಬು ವಶಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ