Select Your Language

Notifications

webdunia
webdunia
webdunia
webdunia

ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಯಾವ ಗಿಫ್ಟ್ ನೀಡಬೇಕೆಂದು ಮಹೇಶ್ ಬಾಬು ಹೇಳಿದ್ದು ಗೊತ್ತಾ?

ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಯಾವ ಗಿಫ್ಟ್ ನೀಡಬೇಕೆಂದು ಮಹೇಶ್ ಬಾಬು ಹೇಳಿದ್ದು ಗೊತ್ತಾ?
ಆಂಧ್ರಪ್ರದೇಶ , ಸೋಮವಾರ, 27 ಆಗಸ್ಟ್ 2018 (15:46 IST)
ಆಂಧ್ರಪ್ರದೇಶ : ಟಾಲಿವುಡ್​ ಸೂಪರ್ ಸ್ಟಾರ್​ ಮಹೇಶ್ ಬಾಬು ರಾಖಿ ಹಬ್ಬದಂದು ಹೆಣ್ಣು ಮಕ್ಕಳು ತಮ್ಮ ಅಣ್ಣ- ತಮ್ಮಂದಿರಿಗೆ ರಾಖಿ ಬದಲು ವಿಶೇಷವಾದ ​ ಉಡುಗೊರೆಯೊಂದನ್ನು ನೀಡಲು ಹೇಳಿದ್ದಾರೆ.


ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ಪುತ್ರಿ ಕವಿತಾ ರಾಖಿ ಹಬ್ಬವನ್ನು ಸ್ಮರಣೀಯ ಗೊಳಿಸುವ ಉದ್ದೇಶದಿಂದ ಸಿಸ್ಟರ್ಸ್ ಫಾರ್ ಚೇಂಜ್ ಆಂದೋಲನ ಆರಂಭಿಸಿದ್ದರು. ಈ ಆಂದೋಲನಕ್ಕೆ ನಟ ಮಹೇಶ್ ಬಾಬು ಅವರು ಕೂಡ ಕೈಜೋಡಿಸಿದ್ದಾರೆ.


ಹಾಗೇ ದೇಶದಲ್ಲಿ 'ಹೆಲ್ಮೆಟ್​ ರಹಿತ ಬೈಕ್​ ಚಾಲನೆಯಿಂದ ಪ್ರತಿದಿನವೂ 15 ರಿಂದ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಲ್ಮೆಟ್ ಧರಿಸದ ತಪ್ಪಿನಿಂದಾಗಿ, ಸಾವಿರಾರು ಕುಟುಂಬ ತಮ್ಮ ಸಂತೋಷವನ್ನೇ ಕಳೆದುಕೊಂಡಿವೆ. ಇದು ಬದಲಾವಣೆಯ ಸಮಯ. ಈ ಬಾರಿಯ ರಕ್ಷಾಬಂಧನದ ದಿನ ನಿಮ್ಮ ಸಹೋದರರಿಗೆ ಹೆಲ್ಮೆಟ್​ ಗಿಫ್ಟ್ ಕೊಡಿ' ಅಂತಾ ಮಹೇಶ್ ಬಾಬು ಮನವಿ ಮಾಡಿದ್ದಾರೆ. ಈ ಮನವಿಗೆ ಸಾವಿರಾರು ಮಂದಿ ಹೆಣ್ಣು ಮಕ್ಕಳು ಸ್ಪಂದಿಸಿದ್ದು ತಮ್ಮ ಸೋದರರಿಗೆ ರಾಖಿ ಬದಲಾಗಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಮಂಜಿನ ಹನಿ' ಚಿತ್ರದ ಸಹನಟಿಗೆ ಸಹನಿರ್ಮಾಪಕನಿಂದ ಮೋಸ