ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟ ಪ್ರಣಾಮ್ ದೇವರಾಜ್

ಭಾನುವಾರ, 26 ಆಗಸ್ಟ್ 2018 (11:16 IST)
ಬೆಂಗಳೂರು : ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ ನಟ ದೇವರಾಜ್ ಅವರ ಎರಡನೇ ಪುತ್ರ ನಟ ಪ್ರಣಾಮ್ ದೇವರಾಜ್ ಇದೀಗ ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.


ನಟ ಪ್ರಣಾಮ್ ದೇವರಾಜ್ 'ಕುಮಾರಿ 21 ಎಫ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ  ಪಾದಾರ್ಪಣೆ ಮಾಡಿ ತಮ್ಮ ಚೊಚ್ಚಲ ಚಿತ್ರದಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ಆವರು ಟಾಲಿವುಡ್ ನಲ್ಲಿ ತಮ್ಮ ಎರಡನೇ ಚಿತ್ರದಲ್ಲಿ ನಟಿಸಲು ಹೊರಟಿದ್ದಾರೆ.


ಈಗಾಗಲೇ ಈ ತೆಲುಗು ಚಿತ್ರದ ಮುಹೂರ್ತವೂ ನಡೆದಿದ್ದು, ಚಿತ್ರಕ್ಕೆ 'ವೈರಂ' ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದ ಪೋಸ್ಟರ್ ಗಳು ಮತ್ತು ಮೋಷನ್ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತಿವೆ. ಸಾಯಿ ಶಿವಾನಿ ಎಂಬುವವರು ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದು, ಜೆ.ಎಂ.ಕೆ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯ್ಲಲೂ ಮೂಡಿ ಬರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿನಿಮಾ ಪ್ರಚಾರಕ್ಕಾಗಿ ‘ಸ್ವಾರ್ಥರತ್ನ’ ಚಿತ್ರತಂಡ ಮಾಡಿದ್ದೇನು ಗೊತ್ತಾ?