Publish Date: Sun, 26 Aug 2018 (09:28 IST)
Updated Date: Sun, 26 Aug 2018 (09:29 IST)
ಬೆಂಗಳೂರು: ಸೆಪ್ಟೆಂಬರ್ 8 ಮತ್ತು 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಆನ್ ಲೈನ್ ಮೂಲಕವೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಕಿಚ್ಚ ಸುದೀಪ್ ಸಾರಥ್ಯದ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ನ ಎಲ್ಲಾ ಸ್ಟಾರ್ ಗಳಲ್ಲದೇ ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಶಾನ್, ಹರ್ಷಲ್ ಗಿಬ್ಸ್ ಮುಂತಾದವರೂ ಆಡುತ್ತಿದ್ದಾರೆ.
ಎರಡು ದಿನಗಳಲ್ಲಿ ಆರು ಪಂದ್ಯಗಳು ಮತ್ತು ಫೈನಲ್ ನಡೆಯಲಿದ್ದು, ಜತೆಗೆ ಚಿತ್ರತಾರೆಯರಿಂದ ಮನರಂಜನೆ ಕಾರ್ಯಕ್ರಮವೂ ಇರಲಿದೆ. ಟಿಕೆಟ್ ದರ 50 ರೂ. ನಿಂದ 5000 ರೂ.ವರೆಗೂ ಇದೆ. in.ticketgenie.in ಗೆ ಲಾಗಿನ್ ಆಗಿ ಅಥವಾ ಬುಕ್ ಮೈ ಶೋ ಮುಖಾಂತರವೂ ಟಿಕೆಟ್ ಕಾಯ್ದಿರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.