Publish Date: Thu, 23 Aug 2018 (15:00 IST)
Updated Date: Thu, 23 Aug 2018 (15:02 IST)
ಬೆಂಗಳೂರು : ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದರ ಮೂಲಕ ಸಂಭ್ರಮಪಡುತ್ತಾರೆ. ಆದರೆ ಸ್ಯಾಂಡಲ್ ವುಡ್ ನಟ ಧನಂಜಯ್ ಮಾತ್ರ ತಮ್ಮ ಹುಟ್ಟುಹಬ್ಬ ದಿನದಂದು ಒಂದೊಳ್ಳೆ ಕೆಲಸ ಮಾಡುವುದರ ಮೂಲಕ ಸಂಭ್ರಮಗೊಂಡಿದ್ದಾರೆ.
ಹೌದು ಇಂದು ನಟ ಡಾಲಿ ಧನಂಜಯ್ ಅವರ ಜನ್ಮದಿನ. ಆದರೆ ಕೊಡಗು ನಲ್ಲಿ ನಡೆದ ಅನಾಹುತ ಕಂಡು ನೊಂದ ನಟ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದೆಂದು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳಿಗೆ ಬೇಸರಮಾಡಬಾರದು ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು.
ಇಂದು ಅಭಿಮಾನಿಗಳನ್ನು ಭೇಟಿ ಮಾಡಿದ ನಟ ಧನಂಜಯ್ ಅಭಿಮಾನಿಗಳಿಂದ ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಹಣ ಸಂಗ್ರಹಿಸುವ ಮೂಲಕ ತಮ್ಮ ಜನುಮದಿನವನ್ನ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ . ಈ ರೀತಿ ತಮ್ಮ ಹುಟ್ಟಿದ ಹಬ್ಬವನ್ನ ಆಚರಿಸಿಕೊಂಡ ನಟನನ್ನು ಕಂಡು ಅಭಿಮಾನಿಗಳಿಗೂ ತುಂಬಾ ಸಂತೋಷವಾಗಿದೆ. ಜೊತೆಗೆ ತಮ್ಮ ನೆಚ್ಚಿನ ನಟನಿಗೆ ಶುಭಾಶೇಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ