Select Your Language

Notifications

webdunia
webdunia
webdunia
webdunia

ನಟ ದರ್ಶನ್ ವೈಲ್ಡ್ ಲೈಫ್ ಪೋಟೋಗಳನ್ನು ಮಾರಾಟ ಮಾಡುತ್ತಿರುವುದು ಯಾರಿಗಾಗಿ ಗೊತ್ತಾ?

ನಟ ದರ್ಶನ್ ವೈಲ್ಡ್ ಲೈಫ್ ಪೋಟೋಗಳನ್ನು ಮಾರಾಟ ಮಾಡುತ್ತಿರುವುದು ಯಾರಿಗಾಗಿ ಗೊತ್ತಾ?
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (07:47 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಅವರು ಮಾನವೀಯ ಗುಣವುಳ್ಳ ನಟ ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ನಟ ದರ್ಶನ್ ಅವರು ಅರಣ್ಯ ವಾಚರ್ ​​​​ಗಳಿಗೆ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮರೆದಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಪಂಚ ಪ್ರಾಣ. ಈಗಾಗಲೇ ಅವರು ಪ್ರಾಣಿಗಳಿಗೆ ಅಂತಾನೆ ಫಾರ್ಮ್ ಹೌಸ್ ವೊಂದನ್ನು ಕಟ್ಟಿಸಿದ್ದಾರೆ. ಇತ್ತೀಚೆಗಷ್ಟೇ ದರ್ಶನ್ ಮಲೆಮಹದೇಶ್ವರ ವನ್ಯಜೀವಿಧಾಮಕ್ಕೆ ಭೇಟಿ ನೀಡಿದ ವೇಳೆ ಅರಣ್ಯ ವಾಚರ್ ​​​​ಗಳ ಪರಿಸ್ಥಿತಿ ಕಂಡು ಬೇಸರಗೊಂಡರಂತೆ.


ಅರಣ್ಯ ವಾಚರ್ ​​​​ಗಳಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡ ನಟ ದರ್ಶನ್ ಮೈಸೂರಿನಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಕ್ಲಿಕ್ಕಿಸಿರುವ ವೈಲ್ಡ್ ಲೈಫ್ ಪೋಟೋಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟು ಸಂಗ್ರಹವಾದ ಹಣವನ್ನು ಅರಣ್ಯ ರಕ್ಷಣೆ ಹಾಗೂ ಫಾರೆಸ್ಟ್ ವಾಚರ್ಸ್ ಗಳ ಜೀವ ವಿಮೆ, ಆರೋಗ್ಯ ವಿಮೆ, ಅವರ ಮಕ್ಕಳ ಶಿಕ್ಷಣ, ಮನೆ ಮುಂತಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ನೀಡಲಿದ್ದಾರಂತೆ. ಈ ಮೂಲಕ ಅವರು ಎಂತಹ ಕರುಣಾಮಯಿ ಎಂಬುದನ್ನು ನಿರೂಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕಿಚ್ಚ ಸುದೀಪ್ ನನ್ನವನು' ಎಂದ ಆ ಮಹಿಳೆ ಯಾರು ಗೊತ್ತಾ?