Publish Date: Thu, 23 Aug 2018 (07:44 IST)
Updated Date: Thu, 23 Aug 2018 (07:46 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್, ಮಾಲಿವುಡ್,ಕಾಲಿವುಡ್, ಬಾಲಿವುಡ್ , ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಸುದೀಪ್ ಅವರಿಗೆ ಈ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ಅಪಾರ ಅಭಿಮಾನಿಗಳ ಬಳಗವೇ ಇದೆ.
ಹೌದು. ಪೋಲೆಂಡ್ ದೇಶದ ಅಗತಾ ಎನ್ನುವ ಮಹಿಳೆಗೆ ಕಿಚ್ಚನೆಂದರೆ ಪಂಚ ಪ್ರಾಣವಂತೆ. ಆಕೆ ಕಿಚ್ಚನ ಅಪ್ಪಟ್ಟ ಅಭಿಮಾನಿಯಂತೆ. ‘ಸುದೀಪ್ ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಚಿತ್ರ ನೋಡಿ ಫಿದಾ ಆಗಿ ಕಿಚ್ಚನಿಗೆ ಫ್ಯಾನ್ ಆಗಿಬಿಟ್ಟಿದ್ದೇನೆ. ನನ್ನ ಮೊಬೈಲ್ ಹಾಗೂ ಲಾಪ್ ಟಾಪ್ ನ ವಾಲ್ ಪೇಪರ್ ಗೆ ಸುದೀಪ್ ಅವರ ಫೋಟೋವನ್ನೇ ಹಾಕಿಕೊಂಡಿದ್ದೇನೆ. ನಿತ್ಯ ಸುದೀಪ್ ಮುಖದರ್ಶನದೊಂದಿಗೆ ನನ್ನ ದಿನಚರಿ ಪ್ರಾರಂಭವಾಗುತ್ತದೆ’ ಎಂದು ತಿಳಿಸಿದ ಅಗತಾ ಸುದೀಪ್ ರ ಪ್ರತಿಯೊಂದು ಚಿತ್ರ,ವಿಡಿಯೋ ಹಾಗೂ ಸುದ್ದಿಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ‘ನಾನು ಇವರ ಧ್ವನಿ,ಸ್ಟೈಲ್ ಇಷ್ಟ ಪಡುತ್ತೇನೆ, ಆತನ ನಗು ನನ್ನ ಹೃದಯವನ್ನು ಚೂರು ಚೂರು ಮಾಡಿದೆ. ಆತ ನನಗೆ ಮಾತ್ರ' ಎಂದು ಕಿಚ್ಚನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸುದೀಪ್ ಕೂಡ ತನ್ನ ಅಭಿಮಾನಿಯ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ