Publish Date: Fri, 24 Aug 2018 (10:05 IST)
Updated Date: Fri, 24 Aug 2018 (10:07 IST)
ಬೆಂಗಳೂರು : ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಹೆಚ್ಚಾಗಿದೆ. ಆದಕಾರಣ ಇದೀಗ ನಟಿ ತಮ್ಮ ಸಂಭಾವನೆ ಕೂಡ ಹೆಚ್ಚು ಮಾಡಿದ್ದಾರಂತೆ.
ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮೊದಲಿಗೆ ನಟಿಸಿದ ‘ಚಲೊ' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಮೂಲಕ ಅವರು ತೆಲುಗು ಇಂಡಸ್ಟ್ರಿಯ ಟಾಪ್ ನಟಿ ಎನಿಸಿಕೊಂಡಿದ್ದಾರೆ. ಸಾಕಷ್ಟು ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊನ್ನೆಯಷ್ಟೆ ಬಿಡುಗಡೆಯಾಗಿರುವ ಗೀತಗೋವಿಂದಂ ಚಿತ್ರ ಕೂಡ ಸಕ್ಸಸ್ ಆಗಿರುವುದು ನಟಿ ರಶ್ಮಿಕಾ ಅವರ ಡಿಮ್ಯಾಂಡ್ ಹೆಚ್ಚುವಂತೆ ಮಾಡಿದೆ.
ಇನ್ನು ನಟಿ ರಶ್ಮಿಕಾ ಟಾಲಿವುಡ್ನ ದೇವದಾಸ ಹಾಗೂ ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರಗಳು ಕೂಡ ಸೆಟ್ಟೇರಲಿವೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಸದ್ಯ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಅವರು ಒಂದು ಚಿತ್ರಕ್ಕೆ ಅರ್ಧ ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ. ನಿರ್ಮಾಪಕರು ಕೂಡ ರಶ್ಮಿಕಾ ಕೇಳಿದಷ್ಟು ಹಣ ನೀಡಲು ರೆಡಿಯಾಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ