ಪ್ರಧಾನಿ ಮೋದಿ ಜತೆ ಸೆಲ್ಫೀಗೆ ಮುಗಿಬಿದ್ದ ಬಾಲಿವುಡ್ ತಾರೆಯರು

ಶುಕ್ರವಾರ, 11 ಜನವರಿ 2019 (09:52 IST)
ನವದೆಹಲಿ: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮತ್ತು ತಂಡ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸೆಲ್ಫೀ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಇದೀಗ ವೈರಲ್ ಆಗಿದೆ.


ಸಿನಿಮಾ ಟಿಕೆಟ್ ಮೇಲೆ ಜಿಎಸ್ ಟಿ ಕಡಿತಗೊಳಿಸಲು ಮನವಿ ಮಾಡಲು ಕರಣ್ ಜೋಹರ್ ನೇತೃತ್ವದಲ್ಲಿ ಬಾಲಿವುಡ್ ತಾರೆಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಕರಣ್ ಜತೆಗೆ ರಣವಿರ್ ಸಿಂಗ್, ರಣಬೀರ್ ಕಪೂರ್, ಅಲಿಯಾ ಭಟ್, ರೋಹಿತ್ ಶೆಟ್ಟಿ ಸೇರಿದಂತೆ ಹಲವಾರು ತಾರೆಯರಿದ್ದರು.

ಇವರೆಲ್ಲರೂ ಸೇರಿಕೊಂಡು ಪ್ರಧಾನಿ ಮೋದಿ ಜತೆ ಸೆಲ್ಫೀ ತೆಗೆಸಿಕೊಂಡಿದ್ದು, ಈ ಫೋಟೋವನ್ನು ಕರಣ್ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಸಾವಿರಾರು ಲೈಕ್ಸ್ ಬಂದಿದೆ. ಈ ವೇಳೆ ತಾರೆಯರ ಮನವಿಗೂ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ: ಇತಿಹಾಸ ನಿರ್ಮಿಸಿದ ಕನ್ನಡ ಸಿನಿಮಾ