Select Your Language

Notifications

webdunia
webdunia
webdunia
webdunia

ಹೃತಿಕ್ ರೋಷನ್ ತಂದೆ ನಿರ್ಮಾಪಕ ರಾಕೇಶ್ ರೋಷನ್ ಗೆ ಕ್ಯಾನ್ಸರ್!

ಹೃತಿಕ್ ರೋಷನ್ ತಂದೆ ನಿರ್ಮಾಪಕ ರಾಕೇಶ್ ರೋಷನ್ ಗೆ ಕ್ಯಾನ್ಸರ್!
ಮುಂಬೈ , ಬುಧವಾರ, 9 ಜನವರಿ 2019 (09:12 IST)
ಮುಂಬೈ: ಬಾಲಿವುಡ್ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಕ್ಯಾನ್ಸರ್ ನಂತಹ ಮಹಾಮಾರಿಗೆ ತುತ್ತಾಗುತ್ತಿರುವುದು ಆಘಾತಕಾರಿ ಸಂಗತಿ. ಇದೀಗ ಹೃತಿಕ್ ರೋಷನ್ ತಂದೆ, ನಿರ್ಮಾಪಕ ರಾಕೇಶ್ ರೋಷನ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ಬಂದಿದೆ.


ಈ ವಿಚಾರವನ್ನು ಸ್ವತಃ ಹೃತಿಕ್ ಬಹಿರಂಗಪಡಿಸಿದ್ದಾರೆ. ರಾಕೇಶ್ ರೋಷನ್ ಗೆ ಕ್ಯಾನ್ಸರ್ ಆರಂಭಿಕ ಹಂತದಲ್ಲಿದೆ ಎಂದು ಹೃತಿಕ್ ಹೇಳಿದ್ದಾರೆ.

ಈಗಾಗಲೇ ನಟ ಇರ್ಫಾನ್ ಖಾನ್, ಸೊನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಇದೀಗ ರಾಕೇಶ್ ಗಂಟಲು ಕ್ಯಾನ್ಸರ್ ನ ಆರಂಭಿಕ ಹಂತದಲ್ಲಿರುವ ಮಾಹಿತಿ ಬಂದಿದೆ.

ಇದೀಗ ರಾಕೇಶ್ ಗಂಟಲು ಕ್ಯಾನ್ಸರ್ ನ ಶಸ್ತ್ರಚಿಕಿತ್ಸೆಗೊಳಗಾಗಬೇಕಿದೆ. ಹಾಗಿದ್ದರೂ ತಮ್ಮ ತಂದೆ ಎಂದಿನಂತ ದೃಢಚಿತ್ತರಾಗಿದ್ದಾರೆ. ತಪ್ಪದೇ ಜಿಮ್ ಮಾಡುತ್ತಾರೆ ಎಂದು ಹೃತಿಕ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಾಮಾ ಜ್ಯೂನಿಯರ್ಸ್ ಅಚಿಂತ್ಯ ನೀಡಿದ ಭರ್ಜರಿ ನ್ಯೂಸ್