Publish Date: Fri, 11 Jan 2019 (09:33 IST)
Updated Date: Fri, 11 Jan 2019 (09:35 IST)
ಇಸ್ಲಾಮಾಬಾದ್: ಕನ್ನಡದ ಕೆಜಿಎಫ್ ಸಿನಿಮಾ ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರ ಇದೀಗ ನೆರೆಯ ಪಾಕಿಸ್ತಾನದಲ್ಲೂ ಬಿಡುಗಡೆಯಾಗಿ ದಾಖಲೆ ಮಾಡಿದೆ.
ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳಷ್ಟೇ ಬಿಡುಗಡೆಯಾಗುತ್ತವೆ. ಆದರೆ ಕನ್ನಡ ಸಿನಿಮಾವೊಂದು ಇದೇ ಮೊದಲ ಬಾರಿಗೆ ಬಿಡುಗಡೆಯಾಗಿ ಇತಿಹಾಸ ನಿರ್ಮಿಸಿದೆ.
ವಿಶೇಷವೆಂದರೆ ಬಾಲಿವುಡ್ ಸಿನಿಮಾಗಳಿಗೆ ಪಾಕ್ ನಲ್ಲಿರುವ ಕ್ರೇಜ್ ಇದೀಗ ಕೆಜಿಎಫ್ ಬಗ್ಗೆಯೂ ಎದ್ದಿದೆ. ಅಲ್ಲಿನ ಅಭಿಮಾನಿಗಳು ಕೆಜಿಎಫ್ ನೋಡಿ ಥ್ರಿಲ್ಲಾಗಿದ್ದಾರೆ. ರಾಕಿ ಬಾಯ್ ಆಕ್ಷನ್ ನೋಡಿ ಪಾಕ್ ಅಭಿಮಾನಿಗಳು ಕೊಂಡಾಡಿದ್ದಾರೆ. ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ನಲ್ಲಿ ಆನ್ ಲೈನ್ ಬುಕಿಂಗ್ ಸೇವೆ ಆರಂಭಿಸಲಾಗಿದೆ. ಅಂತೂ ಪಾಕಿಸ್ತಾನದಲ್ಲೂ ಕೆಜಿಎಫ್ ದಾಖಲೆ ಗಳಿಕೆ ಮಾಡುತ್ತಾ ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ