Publish Date: Sat, 02 Mar 2019 (09:32 IST)
Updated Date: Sat, 02 Mar 2019 (09:34 IST)
ಬೆಂಗಳೂರು: ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಯಾಗುವಾಗ ಆ ಸಿನಿಮಾ ಹೀರೋ ಕಟೌಟ್ ಹಾಕುವುದು ಗಾಂಧೀನಗರದಲ್ಲಿ ಸಾಮಾನ್ಯ. ಆದರೆ ಈ ಬಾರಿ ಸ್ಯಾಂಡಲ್ ವುಡ್ ಹೀರೋಗಳನ್ನು ಮೀರಿಸಿದ್ದಾರೆ ನಾಯಕಿ ರಶ್ಮಿಕಾ ಮಂದಣ್ಣ.
ಯಜಮಾನ ಚಿತ್ರ ನಿನ್ನೆ ಬಿಡುಗಡೆಯಾಗಿದ್ದು, ನರ್ತಕಿ ಥಿಯೇಟರ್ ಮುಂದೆ ಚಾಲೆಂಜಿಂಗ್ ಸ್ಟಾರ್ ಆಳೆತ್ತರದ ಕಟೌಟ್ ಎಲ್ಲರನ್ನೂ ಸೆಳೆದಿತ್ತು. ದರ್ಶನ್ ಅಭಿಮಾನಿಗಳು ಮಾಡಿದ ಕೆಲಸವನ್ನೇ ಇದೀಗ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮಾಡಿದ್ದು, ರಶ್ಮಿಕಾ ಬೃಹತ್ ಕಟೌಟ್ ನ್ನು ಹಾಕಿದ್ದಾರೆ.
ಇದು ಸ್ಯಾಂಡಲ್ ವುಡ್ ಮಟ್ಟಿಗೆ ದಾಖಲೆಯೇ ಸರಿ. ಈ ರೀತಿ ಹೀರೋಯಿನ್ ಗಳ ಬೃಹತ್ ಕಟೌಟ್ ಹಾಕಿ, ಅದಕ್ಕೆ ಹೂ ಮಾಲೆ ಹಾಕಿಸಿಕೊಂಡ ಹೆಗ್ಗಳಿಕೆ ಇದೀಗ ಲಕ್ಕಿ ಗರ್ಲ್ ರಶ್ಮಿಕಾ ಪಾಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.