Select Your Language

Notifications

webdunia
webdunia
webdunia
Friday, 11 April 2025
webdunia

ತಮ್ಮ ಅಭಿಷೇಕ್ ಗಾಗಿ ಅಭಿಮಾನಿಗಳ ಎದುರು ಕೈ ಮುಗಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (09:02 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ರನ್ನು ತಮ್ಮ ತಂದೆಯ ಸಮಾನ ಎಂದೇ ಪರಿಗಣಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪುತ್ರ ಅಭಿಷೇಕ್ ರನ್ನೂ ತನ್ನ ಸಹೋದರನಂತೇ ಕಾಣುತ್ತಾರೆ.


ತಮ್ಮ ಅಭಿಷೇಕ್ ಚೊಚ್ಚಲ ಸಿನಿಮಾ ಯಶಸ್ವಿಯಾಗಲೆಂದು ಈಗಾಗಲೇ ದರ್ಶನ್ ‘ಅಮರ್’ ಸಿನಿಮಾದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಮರ್ ಸಿನಿಮಾ ಟ್ರೈಲರ್ ಕೂಡಾ ದರ್ಶನ್ ಅಭಿನಯದ ‘ಯಜಮಾನ’ ರಿಲೀಸ್ ಜತೆಗೇ ನಡೆಯಲಿದೆ. ಹೀಗಾಗಿ ದರ್ಶನ್ ತಮ್ಮ ಅಭಿಷೇಕ್ ಗಾಗಿ ಕೈ ಮುಗಿದು ಅಭಿಮಾನಿಗಳಿಗೆ ಚಿತ್ರ ನೋಡುವಂತೆ ಮನವಿ ಮಾಡಿದ್ದಾರೆ.

‘ನನ್ನ ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟ್ರೈಲರ್ ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಅಪ್ಪಾಜಿಯ ಖದರ್ ಅನ್ನು ಅಭಿಯಲ್ಲೂ ಕಾಣಬಹುದು. ನೋಡಿ, ಪ್ರೀತಿಯಿಂದ ಅಭಿಯನ್ನು ಸ್ವಾಗತಿಸಬೇಕಾಗಿ ವಿನಂತಿ’ ಎಂದು ದರ್ಶನ್ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಮಕ್ಕಳ ಮುದ್ದಿನ ತಾಯಿಯ ಕತೆ ಹೇಳಲು ಹೊರಟಿರುವ ಸೂಪರ್ ಹಿಟ್ ಧಾರವಾಹಿಗಳ ನಿರ್ದೇಶಕ