Select Your Language

Notifications

webdunia
webdunia
webdunia
webdunia

ಅನಾರೋಗ್ಯ ಪೀಡಿತ ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಕಿಚ್ಚ ಸುದೀಪ್ ಕೊಟ್ಟ ಹಣವೆಷ್ಟು ಗೊತ್ತಾ?!

ಅನಾರೋಗ್ಯ ಪೀಡಿತ ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಕಿಚ್ಚ ಸುದೀಪ್ ಕೊಟ್ಟ ಹಣವೆಷ್ಟು ಗೊತ್ತಾ?!
ಬೆಂಗಳೂರು , ಮಂಗಳವಾರ, 26 ಫೆಬ್ರವರಿ 2019 (09:07 IST)
ಬೆಂಗಳೂರು: ಅಧಿಕ ರಕ್ತದೊತ್ತಡ, ಆಯಾಸದಿಂದಾಗಿ ಆಸ್ಪತ್ರೆ ಸೇರಿರುವ ನಟಿ ವಿಜಯಲಕ್ಷ್ಮಿ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುತ್ತಿದ್ದು, ಚಿಕಿತ್ಸೆಗೆ ನೆರವಾಗಿ ಎಂದು ಅವರ ಸಹೋದರಿ ಮೊನ್ನೆಯಷ್ಟೇ ಮಾಧ್ಯಮಗಳ ಎದುರು ಮನವಿ ಮಾಡಿದ ಸುದ್ದಿ ಓದಿರುತ್ತೀರಿ.


ವಿಜಯಲಕ್ಷ್ಮಿ ಅಸಹಾಯಕ ಪರಿಸ್ಥಿತಿಗೆ ಇದೀಗ ಕಿಚ್ಚ ಸುದೀಪ್ ನೆರವಾಗಲು ಮುಂದೆ ಬಂದಿದ್ದಾರೆ. ವಿಜಯಲಕ್ಷ್ಮಿ ಚಿಕಿತ್ಸೆಗೆಂದು ಸುದೀಪ್ ಹಣ ಸಹಾಯ ಮಾಡಿದ್ದಾರೆ.

ಸುದೀಪ್, ವಿಜಯಲಕ್ಷ್ಮಿಗೆ 1 ಲಕ್ಷ ರೂ. ನೆರವು ನೀಡಿದ್ದಾರೆಂಬ ವಿಚಾರ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಮೂಲಕ ಬಹಿರಂಗವಾಗಿದೆ. ಭಾ ಮಾ ಹರೀಶ್ ಟ್ವಿಟರ್ ಮೂಲಕ ಈ ವಿಷಯ ಬಹಿರಂಗಪಡಿಸಿ, ಕಿಚ್ಚನಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಿಜಯಲಕ್ಷ್ಮಿಗೆ ಸುದೀಪ್ ಮಾತ್ರವಲ್ಲದೆ, ಚಿತ್ರರಂಗದ ಇನ್ನೂ ಅನೇಕರು ಸಹಾಯ ಹಸ್ತ ಚಾಚಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಳಿಕ ಬಂಡೀಪುರಕ್ಕಾಗಿ ಪುನೀತ್ ರಾಜ್ ಕುಮಾರ್ ಮೊರೆ