Select Your Language

Notifications

webdunia
webdunia
webdunia
webdunia

ಆಸ್ಪತ್ರೆ ಸೇರಿದ ನಟಿ ವಿಜಯಲಕ್ಷ್ಮಿ ಸ್ಥಿತಿ ಏನಾಗಿದೆ ಗೊತ್ತಾ?! ನಿಜಕ್ಕೂ ಶಾಕಿಂಗ್!

ಆಸ್ಪತ್ರೆ ಸೇರಿದ ನಟಿ ವಿಜಯಲಕ್ಷ್ಮಿ ಸ್ಥಿತಿ ಏನಾಗಿದೆ ಗೊತ್ತಾ?! ನಿಜಕ್ಕೂ ಶಾಕಿಂಗ್!
ಬೆಂಗಳೂರು , ಶನಿವಾರ, 23 ಫೆಬ್ರವರಿ 2019 (09:31 IST)
ಬೆಂಗಳೂರು: ‘ನಾಗಮಂಡಲ’ ಖ್ಯಾತಿಯ ನಾಯಕಿ ನಟಿ ವಿಜಯಲಕ್ಷ್ಮಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಹಲವು ಸಮಯದ ನಂತರ ಇತ್ತೀಚೆಗೆ ಖಾಸಗಿ ವಾಹಿನಿ ಮೂಲಕ ತಮ್ಮ ಜೀವನದ ಕರಾಳ ಘಟನೆಗಳನ್ನು ಹಂಚಿಕೊಂಡಿದ್ದ ಈಕೆ ಇದೀಗ ಆಸ್ಪತ್ರೆ ಸೇರಿದ್ದಾರೆ.


ಅವಕಾಶಗಳೂ ಇಲ್ಲದೇ, ತನ್ನ ವೈಯಕ್ತಿಕ ಬದುಕಿನಲ್ಲೂ ನಾನಾ ಹಿಂಸೆ ಅನುಭವಿಸಿದ್ದ ನಟಿ ತಾನು ಪಟ್ಟ ಕಷ್ಟಗಳನ್ನು ಎಲ್ಲರೆದುರು ಹಂಚಿಕೊಂಡಿದ್ದರು. ಈ ನಡುವೆ ಚಿತ್ರರಂಗದ ಕೆಲವರು ಆಕೆಗೆ ಸಹಾಯದ ಭರವಸೆ ನೀಡಿದ್ದರು. ಆದರೆ ಅದು ಈಡೇರಿರಲಿಲ್ಲ.

ಇದೀಗ ವಿಜಯಲಕ್ಷ್ಮಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಚಿಕಿತ್ಸೆಗೂ ಹಣವಿಲ್ಲದೇ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಜಯಲಕ್ಷ್ಮೀ ಸಹೋದರಿ ಉಷಾದೇವಿ ತನ್ನ ತಂಗಿ ರಕ್ತದೊತ್ತಡ ಹೆಚ್ಚಳ ಮತ್ತು ಅನಾಯಾಸದಿಂದಾಗಿ ಆಸ್ಪತ್ರೆಯಲ್ಲಿದ್ದಾಳೆ. ತಾಯಿಗೆ ಹುಷಾರಿಲ್ಲದೇ ಇದ್ದ ಕಾರಣ ಆಕೆಯ ಚಿಕಿತ್ಸೆಗೆ ನಮ್ಮ ಬಳಿ ಇದ್ದ ಹಣವೆಲ್ಲಾ ಖರ್ಚು ಮಾಡಿದ್ದೇವೆ. ಈಗ ವಿಜಯಲಕ್ಷ್ಮಿ ಚಿಕಿತ್ಸೆಗೆ ಚಿತ್ರರಂಗದಿಂದ ಯಾರಾದರೂ ಸಹಾಯ ಮಾಡಿಯಾರು ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ನಡತೆಯೇ ಸರಿ ಇಲ್ಲ ಎಂದು ವಿಡಿಯೋ ಹರಿಯಬಿಟ್ಟ ನಟ ರಾಜೇಶ್ ಧ್ರುವ