Publish Date: Thu, 21 Feb 2019 (09:29 IST)
Updated Date: Thu, 21 Feb 2019 (09:31 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮಹತ್ವಾಂಕಾಂಕ್ಷೆಯ ಸಿನಿಮಾ ‘ಪೈಲ್ವಾನ್’ ಶೂಟಿಂಗ್ ಮುಗಿದಿದ್ದು, ಕೊನೆಯ ಹಾಡಿನ ಚಿತ್ರೀಕರಣವೊಂದು ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ಪೈಲ್ವಾನ್ ಟೀಸರ್ ಭಾರೀ ಸದ್ದು ಮಾಡಿದೆ. ಸುದೀಪ್ ಪೈಲ್ವಾನ್ ನ ಅವತಾರ ನೋಡಿ ಸ್ವತಃ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ಹಾಡಿನ ಚಿತ್ರೀಕರಣ ಮುಗಿದರೆ ಶೂಟಿಂಗ್ ಸಮಾಪ್ತಿಯಾದಂತೆ ಎಂದು ಕಿಚ್ಚ ಮಾಹಿತಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಬೆಸ್ಟ್ ಎನ್ನುವ ಪರ್ಫಾರ್ಮೆನ್ಸ್ ಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣ ಒಂದು ರೀತಿಯಲ್ಲಿ ಎಲ್ಲರಿಗೂ ಅಗ್ನಿಪರೀಕ್ಷೆಯಾಗಿತ್ತು. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಕಿಚ್ಚ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ