Publish Date: Wed, 20 Feb 2019 (09:14 IST)
Updated Date: Wed, 20 Feb 2019 (09:15 IST)
ಬೆಂಗಳೂರು: ಕಿಚ್ಚ ಸುದೀಪ್ ಬಗ್ಗೆ ಎರಡೇ ಎರಡು ಮಾತು ಹೇಳಿ? ಹೀಗಂತ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ ನೋಡಿ ಸ್ವತಃ ಕಿಚ್ಚನ ಮನಗೆದ್ದಿದೆ.
ಟ್ವಿಟರ್ ನಲ್ಲಿ ಅಭಿಮಾನಿಗಳ ಜತೆಗೆ ಪ್ರಶ್ನೋತ್ತರ ಸೆಷನ್ ಮಾಡಿದ ರಶ್ಮಿಕಾ ಹಾಯ್, ಹಲೋ ಬಿಟ್ಟು ಏನೇ ಪ್ರಶ್ನೆ ಇದ್ದರೂ ಕೇಳಿ ಎಂದಿದ್ದರು. ಇದಕ್ಕೆ ಸುದೀಪ್ ಅಭಿಮಾನಿಗಳ ಬಳಗ ಕಿಚ್ಚ ಸುದೀಪ್ ಬಗ್ಗೆ ಎರಡು ಮಾತು ಹೇಳಿ ಎಂದು ಕೇಳಿಕೊಂಡಿದ್ದರು.
ಇದಕ್ಕೆ ರಶ್ಮಿಕಾ ‘ಅವರು ತುಂಬಾ ಕಾಳಜಿಯುಳ್ಳ ಮನುಷ್ಯ, ತುಂಬಾ ಪ್ರಾಮಾಣಿಕ’ ಎಂದುತ್ತರಿಸಿದ್ದಾರೆ. ರಶ್ಮಿಕಾ ಉತ್ತರ ಕಿಚ್ಚನವರೆಗೂ ತಲುಪಿದ್ದು, ರಶ್ಮಿಕಾಗೆ ಧನ್ಯವಾದ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ