Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನ ದರ್ಶನ್ ಮಾತನ್ನು ಚಾಚೂ ತಪ್ಪದೆ ಪಾಲಿಸಿದ ಅಭಿಮಾನಿಗಳು

ದರ್ಶನ್
ಬೆಂಗಳೂರು: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜನ್ಮದಿನದ ಸಂಭ್ರಮ. ಆದರೆ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಗೌರವಾರ್ಥ ದರ್ಶನ್ ಈ ಬಾರಿ ಕೇಕ್ ಕಟ್ ಮಾಡಿ ಸಂಭ್ರಮಿಸದಿರಲು ನಿರ್ಧರಿಸಿದ್ದಾರೆ.

ಅಷ್ಟೇ ಅಲ್ಲ, ಅಭಿಮಾನಿಗಳೂ ಮನೆ ಮುಂದೆ ಕೇಕ್ ತಂದು ಸಂಭ್ರಮಾಚರಣೆ ಮಾಡಬೇಡಿ ಎಂದು ದರ್ಶನ್ ಮೊದಲೇ ಮನವಿ ಮಾಡಿದ್ದರು. ದರ್ಶನ್ ಕರೆಗೆ ಓಗೊಟ್ಟ ಅಭಿಮಾನಿಗಳು ಕೇಕ್ ಕಟ್ ಮಾಡಲ್ಲ ಆದರೆ ನಿಮ್ಮ ಆಸೆಯಂತೆ ಅನಾಥಾಶ್ರಮಗಳಿಗೆ ಅನ್ನದಾನ ಮಾಡಿ ಸಾಮಾಜಿಕ ಕೆಲಸ ಮಾಡುತ್ತೇವೆ ಎಂದಿದ್ದರು.

webdunia
ಅದರಂತೆ ಇಂದು ಅಭಿಮಾನಿಗಳು ದರ್ಶನ್ ಮನೆ ಮುಂದೆ ಜಮಾಯಿಸದೇ ಅನಾಥಾಶ್ರಮಗಳಿಗೆ ಅನ್ನದಾನ ಮಾಡುತ್ತಿದ್ದಾರೆ. ದರ್ಶನ್ ಕೋರಿಕೆಯಂತೆ ಸಿದ್ಧಗಂಗಾ ಮಠಕ್ಕೆ 12 ಮೂಟೆ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು, ತಮಗೆ ಶುಭಕೋರಲು ಮನೆಗೆ ಬರುವ ಅಭಿಮಾನಿಗಳಿಗೆ ದರ್ಶನ್ ಊಟ ಹಾಕಿ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಸಮಾಜಕ್ಕೆ ಒಳ್ಳೆಯದಾಗುವಂತೆ ನೋಡಿಕೊಂಡಿದ್ದಾರೆ ಡಿ ಬಾಸ್.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದ ಯೋಧನಿಗೆ ರಾಕಿಂಗ್ ಸ್ಟಾರ್ ಯಶ್ ನಮನ