ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಮಿತ್ರ, ನವರಸನಾಯಕ ಜಗ್ಗೇಶ್ ಹಳೆಯ ಘಟನೆಯೊಂದನ್ನು ನೆನಪಿಸಿದ್ದಾರೆ.
1987 ರಲ್ಲಿ ಆಗಷ್ಟೇ ವಿವಾಹಿತರಾಗಿದ್ದ ರವಿಚಂದ್ರನ್ ನೋಡಲು ಸೆಟ್ ಗೆ ಬಂದಿದ್ದ ಪತ್ನಿ ಪತಿಯನ್ನು ನೋಡಿ ಕಣ್ಣೀರು ಹಾಕಿದ್ದರು ಎಂಬ ಸಂಗತಿಯನ್ನು ಜಗ್ಗೇಶ್ ಬಹಿರಂಗಪಡಿಸಿದ್ದಾರೆ.
ಆಗ ರಣಧೀರ ಚಿತ್ರದ ಬಾ ಬಾರೋ ಬಾರೋ ರಣಧೀರ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ರವಿಚಂದ್ರನ್ ಗೆ ಮದುವೆಯಾಗಿ 15 ದಿನ ಆಗಿತ್ತಷ್ಟೇ. ಗಂಡನ ಕಾಣಲು ಸೆಟ್ ಗೆ ಬಂದಿದ್ದ ರವಿಚಂದ್ರನ್ ಹೆಂಡತಿ ಅವರನ್ನು ನೋಡಿ ಕಣ್ಣೀರು ಹಾಕಿದರಂತೆ. ಆಗ ರವಿಚಂದ್ರನ್ ಹೆಂಡತಿಯನ್ನು ಸಂತೈಸಿದ್ದರು. ಅವರನ್ನು ನೋಡುತ್ತಿದ್ದ ನನಗೆ ನನ್ನ ಹೆಂಡತಿ ಮತ್ತು 6 ತಿಂಗಳ ಮಗ ಗುರು ನೆನಪಿಗೆ ಬಂದರು ಎಂದು ಜಗ್ಗೇಶ್ ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!