Publish Date: Thu, 14 Feb 2019 (09:14 IST)
Updated Date: Thu, 14 Feb 2019 (09:15 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಇಂದು ನಮ್ಮೊಂದಿಗಿಲ್ಲ. ಹಾಗಿದ್ದರೂ ಅವರ ಆಶೀರ್ವಾದ, ಬೆಂಬಲ ಯಾವತ್ತೂ ನಮ್ಮ ಜತೆಗಿರುತ್ತದೆ ಎಂದು ನಂಬಿಕೊಂಡವರು ಪತ್ನಿ ಸುಮಲತಾ ಅಂಬರೀಷ್.
ಇದೀಗ ಪುತ್ರ ಅಭಿಷೇಕ್ ಚೊಚ್ಚಲ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಭಾವುಕರಾಗಿರುವ ಸುಮಲತಾ ಅಂಬರೀಷ್ ಇದ್ದಿದ್ದರೆ ಇವತ್ತು ಯಾವ ರೀತಿ ವಿಷ್ ಮಾಡುತ್ತಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
‘ನಾವು ಯಾವತ್ತೂ ಅವರ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಬಯಸುತ್ತಿದ್ದೆವು. ಅವರೀಗ ಬಹುಶಃ ಸ್ವರ್ಗದಲ್ಲೇ ಕುಳಿತು ಎಲ್ಲವನ್ನೂ ನೋಡುತ್ತಿರಬಹುದು ಮತ್ತು ‘ಆಲ್ ದಿ ಬೆಸ್ಟ್ ಮಗನೇ’ ಎನ್ನುತ್ತಿರಬಹುದು. ಅಭಿ.. ನಮ್ಮೆಲ್ಲಾ ಪ್ರೀತಿ, ಹಾರೈಕೆ ನಿನ್ನ ಜತೆಗೆ ಯಾವತ್ತೂ ಇರುತ್ತದೆ’ ಎಂದು ಸುಮಲತಾ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ