Publish Date: Thu, 14 Feb 2019 (09:11 IST)
Updated Date: Thu, 14 Feb 2019 (09:13 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಮಗನ ಸಮಾನರಾಗಿ ಕಾಣುತ್ತಿದ್ದ ದರ್ಶನ್ ಇದೀಗ ಅಂಬಿ ಪುತ್ರ ಅಭಿಷೇಕ್ ಗೆ ಅಭಯ ನೀಡಿದ್ದಾರೆ.
ವಿಷಯ ಏನಪ್ಪಾ ಅಂದರೆ ಇಂದು ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ‘ಅಮರ್’ ನ ಟೀಸರ್ ಬಿಡುಗಡೆಯಾಗುತ್ತಿದೆ. ಹೀಗಾಗಿ ದರ್ಶನ್ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ.
‘ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲಿ ವೆಲ್ ಕಮ್. ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ, ಹರಸಿ, ಬೆಳೆಸಿ’ ಎಂದು ದರ್ಶನ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಕೋರಿದ್ದಾರೆ. ಈಗಾಗಲೇ ‘ತಮ್ಮ’ ಅಭಿಷೇಕ್ ಗೆ ಬೆಂಬಲವಾಗಿ ನಿಲ್ಲಲು ದರ್ಶನ್ ಅಮರ್ ಸಿನಿಮಾದಲ್ಲಿ ಸಣ್ಣ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ ಅಭಿಷೇಕ್ ಗೆ ತಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ