ರಶ್ಮಿಕಾ ಮಂದಣ್ಣಗೆ ಡಿ ಬಾಸ್ ದರ್ಶನ್ ಮೆಸೇಜ್ ಮಾಡಿ ಧನ್ಯವಾದ ಸಲ್ಲಿಸಿದ್ದೇಕೆ ಗೊತ್ತಾ?

ಸೋಮವಾರ, 11 ಫೆಬ್ರವರಿ 2019 (09:33 IST)
ಬೆಂಗಳೂರು: ಯಜಮಾನ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುಷಿಯಾಗಿದ್ದಾರೆ.


ಈ ಸಿನಿಮಾ ಮಾರ್ಚ್ 1 ಕ್ಕೆ ತೆರೆ ಕಾಣುವುದು ಇದೀಗ ಪಕ್ಕಾ ಆಗಿದೆ. ದರ್ಶನ್ ರ ಎಂದಿನ ಮಾಸ್ ಶೈಲಿಯ ಸಿನಿಮಾ ಇದು ಎಂಬುದು ಟ್ರೈಲರ್ ನಲ್ಲೇ ಪಕ್ಕಾ ಆಗಿದೆ. ಈ ಟ್ರೈಲರ್ ಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣಗೂ ಟ್ವೀಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ದರ್ಶನ್ ಟ್ವೀಟ್ ಮಾಡಿರುವುದು ನೋಡಿ ಖುಷಿಯಾಗಿರುವ ರಶ್ಮಿಕಾ ನಿಮ್ಮ ಜತೆ ಕೆಲಸ ಮಾಡಿದ್ದೇ ನನಗೆ ತುಂಬಾ ಖುಷಿ ಕೊಟ್ಟಿದೆ. ರಿಲೀಸ್ ಗಾಗಿ ಕಾಯುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಸುಮಾರು ಒಂದೂವರೆ ವರ್ಷಗಳ ನಂತರ ದರ್ಶನ್ ಸಿನಿಮಾವೊಂದು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳು ನಿಜಕ್ಕೂ ಖುಷಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಮಶಾನದಲ್ಲಿ ಕಾಲು ಜಾರಿ ಬಿದ್ದ ನಟಿ ರಾಧಿಕಾ