ಇಂದು ಸಂಜೆ 5 ಗಂಟೆಗೆ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಹಬ್ಬ

ಮಂಗಳವಾರ, 5 ಫೆಬ್ರವರಿ 2019 (09:33 IST)
ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿ ಈಗಾಗಲೇ ವೈರಲ್ ಆಗಿದೆ. ಇಂದು ‘ಯಜಮಾನ’ನ ಟೈಟಲ್ ಟ್ರಾಕ್ ಬಿಡುಗಡೆಯಾಗುತ್ತಿದೆ.


ಇಂದು ಸಂಜೆ 5 ಗಂಟೆಗೆ ಯಜಮಾನ ಟೈಟಲ್ ಹಾಡು ಯೂ ಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಲಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ. ಸಂತೋಷ್ ಆನಂದ್ ರಾಮ್ ಸಾಹಿತ್ಯವಿದೆ.

ನಾಯಕನ ಗುಣಗಳನ್ನು ಗುಣಗಾನ ಮಾಡುವ ಸಾಲುಗಳನ್ನೇ ಸಂತೋಷ್ ಆನಂದ್ ರಾಮ್ ಈ ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿರುವ ಕ್ರೇಜ್ ನೋಡಿದರೆ ಈ ಹಾಡು ಕೂಡಾ ಹಿಟ್ ಆಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಿ ವಿಲನ್ ಕಿರುತೆರೆಗೆ ಎಂಟ್ರಿಗೆ ಮುಹೂರ್ತ ಫಿಕ್ಸ್: ಬಿಲ್ಡಪ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಏನಂದ್ರು?