Select Your Language

Notifications

webdunia
webdunia
webdunia
webdunia

ದಿ ವಿಲನ್ ಕಿರುತೆರೆಗೆ ಎಂಟ್ರಿಗೆ ಮುಹೂರ್ತ ಫಿಕ್ಸ್: ಬಿಲ್ಡಪ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಏನಂದ್ರು?

ದಿ ವಿಲನ್ ಕಿರುತೆರೆಗೆ ಎಂಟ್ರಿಗೆ ಮುಹೂರ್ತ ಫಿಕ್ಸ್: ಬಿಲ್ಡಪ್ ಕೊಟ್ಟಿದ್ದಕ್ಕೆ ಪ್ರೇಕ್ಷಕರು ಏನಂದ್ರು?
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (09:28 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ದಿ ವಿಲನ್ ಸಿನಿಮಾ ಕಿರುತೆರೆಗೆ ಬರುತ್ತಿರುವುದು ಈಗಾಗಲೇ ಗೊತ್ತಾಗಿದೆ. ಆದರೆ ಯಾವಾಗ ಎಂದು ಡೇಟ್ ಇದೀಗ ಫಿಕ್ಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತೆ ಟ್ರೋಲ್ ಮಾಡಲು ಶುರು ಹಚ್ಚಿಕೊಂಡಿದ್ದಾರೆ.


ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜತೆಯಾಗಿ ಅಭಿನಯಿಸಿದ್ದ ದಿ ವಿಲನ್ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ನಿರೀಕ್ಷೆಗೆ ತಕ್ಕ ಸಿನಿಮಾ ಇರಲಿಲ್ಲ ಎನ್ನುವುದು ಪ್ರೇಕ್ಷಕರ ಈ ರೀತಿಯ ಕುಹುಕಕ್ಕೆ ಕಾರಣ. ಆದರೆ ಅದರ ನಡುವೆಯೂ ಕೆಲವರು ನಾವು ಚಿತ್ರ ಮತ್ತೆ ನೋಡುತ್ತೇವೆ ಎಂದಿದ್ದಾರೆ.

ಫೆಬ್ರವರಿ 17 ರಂದು ಭಾನುವಾರ ಸಂಜೆ 7 ಕ್ಕೆ ದಿ ವಿಲನ್ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಇದರ ಜಾಹೀರಾತು ನೋಡಿರುವ ಪ್ರೇಕ್ಷಕರು ಈ ಸಿನಿಮಾಗೆ ಇಷ್ಟೊಂದು ಬಿಲ್ಡಪ್ ಬೇಕಾ ಎಂದು ಟ್ರೋಲ್ ಮಾಡಿದ್ದಾರೆ. ಅದೇನೇ ಇದ್ದರೂ ನೋಡುವುದು ಬಿಡುವುದು ನಿಮಗೇ ಬಿಟ್ಟಿದ್ದು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ಆರೋಪದಲ್ಲಿ ಖ್ಯಾತ ನಟಿ ಭಾನುಪ್ರಿಯಾ