ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸಿದ್ಧಾರ್ಥ್ ಮದುವೆ ಸುದ್ದಿ ಬಂದ ಬೆನ್ನಲ್ಲೇ ಅದೇ ವಾಹಿನಿಯ ಮತ್ತೊಂದು ಧಾರವಾಹಿಯ ನಾಯಕ ನಟನಿಗೆ ಮದುವೆ ಸುದ್ದಿ ಬಂದಿದೆ.
ಕಳೆದ ಆವೃತ್ತಿಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಜಗನ್ ಚಂದ್ರಶೇಖರ್ ಇದೀಗ ಮದುವೆಯಾಗುತ್ತಿರುವ ಮತ್ತೊಬ್ಬ ನಟ. ಜಗನ್ ಕಲರ್ಸ್ ಕನ್ನಡದಲ್ಲಿ ಈ ಮೊದಲು ‘ಗಾಂಧಾರಿ’ ಧಾರವಾಹಿಗೆ ನಾಯಕರಾಗಿದ್ದರು. ಬಳಿಕ ಈಗ ‘ಸೀತಾ ವಲ್ಲಭ’ಕ್ಕೆ ನಾಯಕನಾಗಿದ್ದಾರೆ.
ತಮ್ಮ ಮುಂಗೋಪದ ವರ್ತನೆಯಿಂದ ಬಿಗ್ ಬಾಸ್ ನಲ್ಲಿದ್ದಾಗ ಸಾಕಷ್ಟು ಟ್ರೋಲ್ ಗೊಳಗಾಗಿದ್ದ ಜಗನ್ ಇದೀಗ ರಕ್ಷಿತ್ ಮುನಿಯಪ್ಪ ಎಂಬವರನ್ನು ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಜಗನ್ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಆದರೆ ಮದುವೆ ಯಾವಾಗ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!