Select Your Language

Notifications

webdunia
webdunia
webdunia
Saturday, 19 April 2025
webdunia

ಮಜಾ ಮನೆಯಲ್ಲಿ ಜಾನಿ ಲಿವರ್ ನೋಡಿ ಪ್ರೇಕ್ಷಕರು ಸೃಜನ್ ಲೋಕೇಶ್ ಗೆ ಹೇಳಿದ್ದೇನು ಗೊತ್ತಾ?

ಮಜಾ ಟಾಕೀಸ್
ಬೆಂಗಳೂರು , ಭಾನುವಾರ, 20 ಜನವರಿ 2019 (09:14 IST)
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಈ ವಾರ ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುವಂತೆ ಮಾಡಿತ್ತು. ಅದಕ್ಕೆ ಕಾರಣ ಹಾಸ್ಯ ನಟ ಜಾನಿ ಲಿವರ್.


ಬಹುಭಾಷಾ ತಾರೆ ಜಾನಿ ಲಿವರ್ ಮಜಾ ಟಾಕೀಸ್ ಮನೆಗೆ ಬಂದಿದ್ದು ನೋಡಿ ಪ್ರೇಕ್ಷಕರು ಈ ಶೋ ನೋಡಲು ಭಾರೀ ಕಾತುರರಾಗಿದ್ದರು. ಇದೀಗ ಶೋ ನೋಡಿದ ಜನ ಜಾನಿ ಲಿವರ್ ಹಾಸ್ಯದ ಹೊನಲು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಕಷ್ಟಗಳನ್ನೂ ಹಾಸ್ಯಮಯವಾಗಿ ಹೇಳಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ ಜಾನಿ.

ಆದರೆ ಜಾನಿ ಲಿವರ್ ಅವರನ್ನು ಸೃಜನ್ ಲೋಕೇಶ್ ಸ್ವಾಗತಿಸಿದ ಪರಿಗೆ ಕೆಲವರು ಆಕ್ಷೇಪವೆತ್ತಿದ್ದಾರೆ. ಅದಕ್ಕೆ ಕಾರಣ ಜಾನಿ ಅವರನ್ನು ಸೃಜನ್ ಕೇವಲ ಹಾಸ್ಯ ನಟ ಎಂದಿದ್ದು ಕೆಲವರಿಗೆ ಇಷ್ಟವಾಗಿಲ್ಲ. ಜಾನಿ ಕೇವಲ ಹಾಸ್ಯ ನಟ ಅಲ್ಲ, ಅವರನ್ನು ಗ್ರೇಟ್ ಆಕ್ಟರ್. ಬರೀ ಹಾಸ್ಯ ನಟ ಎಂದಿದ್ದು ಇಷ್ಟವಾಗಲಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಪಸ್ವರವೆತ್ತಿದ್ದಾರೆ. ಅದೇನೇ ಇರಲಿ, ಸದಾ ಸ್ಯಾಂಡಲ್ ವುಡ್ ‍ತಾರೆಯರನ್ನು ಶೋಗೆ ಕರೆಸುವ ಸೃಜನ್ ಈ ಬಾರಿ ಬಹುಭಾಷಾ ತಾರೆಯನ್ನು ಶೋಗೆ ಕರೆಸಿ ಅದ್ಭುತ ಮನರಂಜನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್-ರಶ್ಮಿಕಾ ಡ್ಯುಯೆಟ್ ಗೆ ಪ್ರೇಕ್ಷಕರು ಫಿದಾ