Publish Date: Thu, 24 Jan 2019 (10:56 IST)
Updated Date: Thu, 24 Jan 2019 (10:58 IST)
ಬೆಂಗಳೂರು: ಧಾರವಾಹಿಗಳು ಎಂದರೆ ಚ್ಯುಯಿಂಗ್ ಗಮ್ ಇದ್ದಂತೆ ಎಳೆಯುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ ಎಂಬ ಪ್ರೇಕ್ಷಕರ ಆಕ್ಷೇಪದ ನಡುವೆ ಕಲರ್ಸ್ ಕನ್ನಡದಲ್ಲಿ ಒಂದು ಜನಪ್ರಿಯ ಧಾರವಾಹಿ ಅಂತ್ಯವಾಗುತ್ತಿದೆ.
ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರವಾಹಿ ನಾಳೆಗೆ ಮುಕ್ತಾಯ ಕಾಣುತ್ತಿದೆ. ಈಗಾಗಲೇ ಈ ಧಾರವಾಹಿ 1011 ಕಂತು ದಾಟಿದೆ. ಇದರ ಬದಲಾಗಿ ‘ಮಿಥುನ ರಾಶಿ’ ಎಂಬ ಅಟೋ ಚಾಲಕಿ ಯುವತಿಯ ಕತೆ ಇರುವ ಹೊಸ ಧಾರವಾಹಿಯೊಂದು ಮುಂದಿನ ಸೋಮವಾರದಿಂದ ಶುರುವಾಗುತ್ತಿದೆ.
ಕಲರ್ಸ್ ಕನ್ನಡದ ಪುಟ್ಟಗೌರಿ ಮದುವೆ, ಅಗ್ನಿಸಾಕ್ಷಿ, ಲಕ್ಷ್ಮೀ ಭಾರಮ್ಮ ಧಾರವಾಹಿಗಳು ಕಳೆದ ಏಳು ವರ್ಷಗಳಿಂದಲೂ ಹೆಚ್ಚು ಕಾಲದಿಂದ ಪ್ರಸಾರವಾಗುತ್ತಲೇ ಇದ್ದು, ಈ ಧಾರವಾಹಿಗಳನ್ನು ಕೊನೆಗಾಣಿಸುವಂತೆ ಆಗಾಗ ಪ್ರೇಕ್ಷಕರು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಆದರೆ ಅದ್ಯಾವುದೂ ಸದ್ಯಕ್ಕೆ ಕೊನೆಗಾಣುವ ಸೂಚನೆಯಿಲ್ಲ. ಅದರ ಬದಲಾಗಿ ಕಿನ್ನರಿ ಮುಕ್ತಾಯವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ