ಸ್ಯಾಂಡಲ್ ವುಡ್ ನಲ್ಲಿ ಯಾರಿಗೆಲ್ಲಾ ನನ್ನ ಕಂಡ್ರಾಗಲ್ಲ ಸಾಕ್ಷಿ ಕೊಡಿ ನೋಡೋಣ: ರಶ್ಮಿಕಾ ಮಂದಣ್ಣ ಸವಾಲು

ಶುಕ್ರವಾರ, 1 ಫೆಬ್ರವರಿ 2019 (09:58 IST)
ಬೆಂಗಳೂರು: ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುತ್ತಿಲ್ಲ ಎಂದೆಲ್ಲಾ ಗಾಸಿಪ್ ಗಳು ಬಂದಿತ್ತು. ಇದೀಗ ಈ ಬಗ್ಗೆ ರಶ್ಮಿಕಾ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.


ಬ್ಲಾಗ್ ಒಂದರಲ್ಲಿ ರಶ್ಮಿಕಾ ಮೇಲೆ ಸ್ಯಾಂಡಲ್ ವುಡ್ ಮುನಿಸಿಕೊಂಡಿದೆ ಎಂದು ಲೇಖನ ಬಂದಿರುವುದು ನೋಡಿ ಕಿರಿಕ್ ಬೆಡಗಿ ನನಗೆ ಪ್ರೂಫ್ ಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸ್ಯಾಂಡಲ್ ವುಡ್ ಗೆ ನನ್ನ ಮೇಲೆ ಬೇಸರವಿದೆ ಎಂದು ನಿಮಗೆ ಯಾರು ಹೇಳಿದ್ದು? ಸುಮ್ಮನೇ ಹೀಗೆ ಬರೀಬೇಡಿ. ನನಗೆ ಪ್ರೂಫ್ ಕೊಡಿ ನೋಡೋಣ. ನನಗೂ ಯಾರಿಗೆ ಬೇಜಾರಿದೆ ಎಂದು ತಿಳಿದುಕೊಳ್ಳಬೇಕು ಎಂಬ ಕುತೂಹಲವಿದೆ. ಯಾಕೆಂದರೆ ಪ್ರತೀ ಬಾರಿ ನೀವು ಈ ರೀತಿ ಬರೆದಾಗ ಅದಕ್ಕೆ ಅರ್ಥವಿಲ್ಲ. ನಾನು ಇದನ್ನೆಲ್ಲಾ ನಂಬುವುದೂ ಇಲ್ಲ. ನನಗೆ ಪ್ರೂಫ್ ಕೊಡಿ’ ಎಂದು ರಶ್ಮಿಕಾ ಟ್ವೀಟ್ ಮೂಲಕ ಲೇಖಕರನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಲ್ಲರೂ ನೋಡ್ತಿದ್ದ ಹಾಗೇ ಪತ್ನಿ ದೀಪಿಕಾ ಪಡುಕೋಣೆಗೆ ಇದೇನು ಮಾಡಿಬಿಟ್ಟರು ರಣವೀರ್ ಸಿಂಗ್?!