Select Your Language

Notifications

webdunia
webdunia
webdunia
webdunia

ಖರ್ಚಿಗೆ ಜೇಬಲ್ಲಿ ದುಡ್ಡು ಬೇಕಲ್ವಾ? ಅದಕ್ಕೆ ಕಿರುತೆರೆ: ರವಿಚಂದ್ರನ್ ಮನದಾಳದ ಮಾತು

webdunia
ಬೆಂಗಳೂರು , ಗುರುವಾರ, 31 ಜನವರಿ 2019 (11:49 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಮತ್ತೆ ಕಲರ್ಸ್ ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗುತ್ತಿದ್ದಾರೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ತಕದಿಮಿತ ಡ್ಯಾನ್ಸ್ ರಿಯಾಲಿಟಿ ಶೋಗೆ ರವಿಚಂದ್ರನ್ ತೀರ್ಪುಗಾರರಾಗಿರುತ್ತಾರೆ. ಹಿರಿತೆರೆಯನ್ನು ಆಳಿದ ಈ ಕಲಾವಿದ ಕಿರುತೆರೆಗೆ ಬರುತ್ತಿರುವ ಬಗ್ಗೆ ಮನದಾಳದ ಮಾತನಾಡಿದ್ದಾರೆ.

‘ನಾನು ಯಾವಾಗಲೂ ಸಿನಿಮಾ ಬಗ್ಗೆ ಯೋಚಿಸುತ್ತಿರುತ್ತೇನೆ. ಟಿವಿ ಕಾರ್ಯಕ್ರಮಗಳಿಂದ ನನ್ನ ಸಿನಿಮಾಕ್ಕೆ ಅಡ್ಡಿಯಾಗಲ್ಲ. ಜೇಬಿಗೂ, ಖರ್ಚಿಗೂ ದುಡ್ಡು ಬೇಕಲ್ಲಾ? ಹಾಗಾಗಿ ಇವು ನನಗೆ ಬದಲಾವಣೆ ಕೊಡುತ್ತೆ. ನಾನು ಎಲ್ಲೇ ಇದ್ದರೂ ಮಾಡಬೇಕಾದ್ದನ್ನು ಮಾಡುತ್ತಲೇ ಇರುತ್ತೇನೆ’ ಎಂದು ರವಿಚಂದ್ರನ್ ಮತ್ತೆ ಕಿರುತೆರೆಗೆ ಬರುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮಧ್ಯೆ ಕಿಚ್ಚು ಹಚ್ಚಬೇಡಿ! ಖಾಸಗಿ ವಾಹಿನಿಗೆ ಯಶ್ ಫ್ಯಾನ್ಸ್ ಎಚ್ಚರಿಕೆ