Publish Date: Wed, 30 Jan 2019 (09:38 IST)
Updated Date: Wed, 30 Jan 2019 (09:39 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು 23 ವರ್ಷದ ಸಂಭ್ರಮ. ಅರೇ ಕಿಚ್ಚನ ಬರ್ತ್ ಡೇ ಇಂದಲ್ಲ, ಅವರಿಗೆ 23 ವರ್ಷವೂ ಅಲ್ಲ ಎಂದು ಅಚ್ಚರಿಯಾಗಬೇಡಿ.
ಕಿಚ್ಚ 23 ರ ಸಂಭ್ರಮದಲ್ಲಿರುವುದು ವಯಸ್ಸಿನ ಲೆಕ್ಕಾಚಾರದಲ್ಲಿ ಅಲ್ಲ. ಸುದೀಪ್ ಬಣ್ಣದ ಲೋಕಕ್ಕೆ ಬಂದು 23 ವರ್ಷವಾದ ಸಂಭ್ರಮದಲ್ಲಿದ್ದಾರೆ. ಇದೇ ಕಾರಣಕ್ಕೆ ಇದೀಗ ಸಿನಿ ರಂಗದ ಸ್ನೇಹಿತರು, ಅಭಿಮಾನಿಗಳು ಕಿಚ್ಚನಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಚಿತ್ರ ನಿರ್ದೇಶಕ ಪವನ್ ಒಡೆಯರ್ ಅಂತೂ ಕಿಚ್ಚ ಸುದೀಪ್ ಗೆ ಟ್ವೀಟ್ ಮಾಡಿದ್ದು, ನೀವು ಸಿನಿ ರಂಗಕ್ಕೆ ಬಂದು 23 ವರ್ಷವಾದರೂ ಇನ್ನೂ 23 ವರ್ಷದ ಹುಡುಗನ ಹಾಗಿದ್ದೀರಿ ಎಂದು ಹೊಗಳಿದ್ದಾರೆ. ಇದಕ್ಕೆ ಕಿಚ್ಚ ಕೂಡಾ ಪ್ರತಿಕ್ರಿಯಿಸಿದ್ದು, ನನ್ನನ್ನು 23 ವರ್ಷದ ಹುಡುಗನಾಗಿ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ