Publish Date: Thu, 31 Jan 2019 (10:43 IST)
Updated Date: Thu, 31 Jan 2019 (10:44 IST)
ಬೆಂಗಳೂರು: ಅಭಿಮಾನಿಗಳನ್ನು ದೇವರು ಎಂದೇ ಪರಿಗಣಿಸುವುದು ಡಾ. ರಾಜ್ ಕುಟುಂಬದ ಪದ್ಧತಿ. ಅದನ್ನು ರಾಜ್ ಪುತ್ರರೂ ಪಾಲಿಸಿಕೊಂಡು ಬರುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮನೆಗೆ ಬಂದ ಅಭಿಮಾನಿಯೊಬ್ಬರಿಗೆ ಸ್ವಲ್ಪ ಏರು ದನಿಯಲ್ಲಿ ಕೂಗಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಪುನೀತ್ ಮನೆಯಲ್ಲಿದ್ದ ಸಂದರ್ಭವಾಗಿದ್ದರಿಂದ ಅವರನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಬಂದು ನಿಂತಿದ್ದರು. ಈ ಸಂದರ್ಭದಲ್ಲಿ ಪುನೀತ್ ಅರ್ಜೆಂಟ್ ಆಗಿ ಎಲ್ಲಿಗೋ ಹೋಗಬೇಕಿತ್ತು. ಅದರ ಬ್ಯುಸಿಯಲ್ಲಿದ್ದರೋ ಏನೋ. ಹಾಗಿದ್ದರೂ ಅಭಿಮಾನಿಗಳಿಗೆ ಅವರು ನಿರಾಶೆ ಮಾಡಲಿಲ್ಲ.
ಸೆಲ್ಫೀ ತೆಗೆಸಿಕೊಂಡು, ಮಾತನಾಡಿಸಿದ ಅಪ್ಪು, ಕೊನೆಗೆ ಊಟ ಮಾಡಿಕೊಂಡು ಹೋಗಲು ಎಲ್ಲರಿಗೂ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಬಳಿ ಸ್ವಲ್ಪ ಜೋರಾಗಿಯೇ ‘ಏಯ್ ಮನೆ ಹಿಂದೆ ಏನೋ ಇದೆ? ಒಂದು ಪಾರ್ಕ್ ಇದೆ ತಾನೆ? ಅಲ್ಲಿ ಊಟ ಮಾಡಿಕೊಂಡು ಹೋಗಿ’ ಎಂದು ಜೋರಾಗಿ ಹೇಳಿದ್ದಾರೆ.
ಬಳಿಕ ಎಲ್ಲರಿಗೂ ಊಟ ಮಾಡಿಕೊಂಡೇ ಹೋಗುವಂತೆ ಹೇಳಿ ಆಲ್ ದಿ ಬೆಸ್ಟ್ ಎನ್ನುತ್ತಾ ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಆದರೆ ಪುನೀತ್ ಈ ರೀತಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ