Publish Date: Wed, 30 Jan 2019 (11:18 IST)
Updated Date: Wed, 30 Jan 2019 (11:20 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ತೆರೆಗೆ ಬರಲು ರೆಡಿಯಾಗುತ್ತಿದೆ. ಇದೀಗ ಭಟ್ಟರು ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪದಲ್ಲಿ ಸಿನಿಮಾ ಪ್ರಚಾರ ಮಾಡಲು ಇಡೀ ತಂಡದೊಂದಿಗೆ ಆಗಮಿಸಿದ್ದಾರೆ.
ಇದೇ ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಪಂಚತಂತ್ರ ರಿಲೀಸ್ ಆಗಲಿದೆ ಎಂದು ಯೋಗರಾಜ್ ಭಟ್ ಈಗಾಗಲೇ ಘೋಷಿಸಿದ್ದಾರೆ. ಹೊಸಬರ ತಂಡದೊಂದಿಗೆ ಭಟ್ಟರು ಈ ಸಿನಿಮಾ ಮಾಡಿದ್ದರೂ ಇದರ ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿದೆ.
ಶೃಂಗಾರ ಕಾವ್ಯದಂತಿರುವ ಸಿನಿಮಾ ಯುವ ಮನಸ್ಸುಗಳಿಗೆ ಇಷ್ಟವಾಗುವುದು ಪಕ್ಕಾ. ಹೀಗಾಗಿ ಪ್ರೇಮಿಗಳ ದಿನವನ್ನೇ ಬಿಡುಗಡೆಗೆ ಪಕ್ಕಾ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ