Publish Date: Sun, 20 Jan 2019 (22:03 IST)
Updated Date: Sun, 20 Jan 2019 (22:04 IST)
ಸ್ಯಾಂಡಲ್ ವುಡ್ ಚಿತ್ರನಟ ದರ್ಶನ್ ಗೆ ಪ್ರಾಣಿ ಪೀತಿಯ ಜೊತೆಗೂ ಪಕ್ಷಿ ಪ್ರೀತಿಯೂ ಇದೆ.
ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡು ಮಂಡ್ಯದಲ್ಲಿ ದರ್ಶನ್ ಸಂಚಾರ ನಡೆಸಿದ್ದರು. ದಚ್ಚು ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಬಂದಿದ್ದ ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಶ್ರೀರಂಗಪಟ್ಟಣ ನಗುವನಹಳ್ಳಿಯ ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್ ಗೆ ಬಂದಿದ್ದ ದರ್ಶನ್ ಫೋಟೋ ಈಗ ವೈರಲ್ ಆಗಿವೆ. ಬಣ್ಣದ ಮಿಂಚ್ಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಮೂರು ಗಂಟೆ ಕಾದು ಕಾವೇರಿ ನದಿ ತೀರದಲ್ಲಿ ದರ್ಶನ್ ಕುಳಿತಿದ್ದರು. ಜ. 15 ರಂದು ದಚ್ಚುವಿನಿಂದ ಸ್ಥಳದಲ್ಲಿ ಪಕ್ಷಿ ವೀಕ್ಷಣೆ ಮಾಡಿದ್ದಾರೆ. ದಚ್ಚು ಸ್ಥಳಕ್ಕೆ ಬಂದಿದ್ದ ಬಗ್ಗೆ ಹಾವೇರಿ ಪಕ್ಷಿಪ್ರೇಮಿ ವಿನಯ್ ಶೆಟ್ಟಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ದಚ್ಚುವಿನ ಸರಳತೆ ಹಾಗೂ ಪಕ್ಷಿ ಪ್ರೀತಿ ಕಂಡು ಮುಗ್ಧರಾದ ವೃತ್ತಿಪರ ಪಕ್ಷಿ ಪ್ರೇಮಿಗಳೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Jagadeesh
Publish Date: Sun, 20 Jan 2019 (22:03 IST)
Updated Date: Sun, 20 Jan 2019 (22:04 IST)