Publish Date: Wed, 16 Jan 2019 (09:34 IST)
Updated Date: Wed, 16 Jan 2019 (09:35 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಬಹಳ ದಿನಗಳಿಂದ ಬರಲೇ ಇಲ್ಲ. ಹೀಗಾಗಿ ಅಭಿಮಾನಿಗಳೂ ಇದೀಗ ಯಜಮಾನ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ಇದರ ಫಲವೇನೋ ಎಂಬಂತೆ ಸಂಕ್ರಾಂತಿ ದಿನ ಬಿಡುಗಡೆಯಾದ ಯಜಮಾನ ಚಿತ್ರದ ಟೈಟಲ್ ಸಾಂಗ್ ‘ಶಿವನಂದಿ’ ಲಿರಿಕಲ್ ಸಾಂಗ್ ಬಿಡುಗಡೆಯಾದ ಗಂಟೆಯಲ್ಲೇ ದಾಖಲೆಗಳನ್ನು ಚಿಂದಿ ಮಾಡಿದೆ.
ಬಿಡುಗಡೆಯಾದ ಮೂರೇ ಗಂಟೆಯಲ್ಲಿ ಒಂದು ಮಿಲಿಯನ್ ವ್ಯೂ ಪಡೆದು ಈ ಹಾಡು ಯೂ ಟ್ಯೂಬ್ ನಲ್ಲಿ ಹೊಸ ದಾಖಲೆ ಮಾಡಿದೆ. ದರ್ಶನ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳು ಹೊಸ ಸಿನಿಮಾದ ಹೊಸ ಹಾಡನ್ನು ಮುಗಿಬಿದ್ದು ನೋಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ