Publish Date: Sun, 13 Jan 2019 (09:18 IST)
Updated Date: Sun, 13 Jan 2019 (09:19 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಪೆಟ್ಟಾ ಅವರೇ ಡಬ್ ಮಾಡಿದರೆ ಕನ್ನಡದಲ್ಲಿ ಬಿಡುಗಡೆ ಮಾಡಬಹುದು ಎಂದು ಲೆಕ್ಕಾಚಾರ ಹಾಕಿದ್ದ ವಿತರಕ ಜಾಕ್ ಮಂಜುಗೆ ನಿರಾಶೆ ಎದುರಾಗಿದೆ.
ಕನ್ನಡದಲ್ಲಿ ರಜನೀಕಾಂತ್ ಡಬ್ ಮಾಡಲ್ಲ ಎನ್ನುವುದು ಈಗ ಖಾತ್ರಿಯಾಗಿದೆ. ಹೀಗಾಗಿ ಕನ್ನಡದಲ್ಲಿ ಪೆಟ್ಟಾ ರಿಲೀಸ್ ಆಗುವುದು ಅನುಮಾನವಾಗಿದೆ.
ಕನ್ನಡದಲ್ಲಿ ಈಗಾಗಲೇ ಡಬ್ಬಿಂಗ್ ಸಿನಿಮಾ ವಿರುದ್ಧ ಸಿನಿ ತಾರೆಯರ ವಿರೋಧವಿದೆ. ಹೀಗಾಗಿ ಮತ್ತೆ ವಿವಾದ ಕಟ್ಟಿಕೊಳ್ಳುವುದು ಬೇಡ ಎಂದು ರಜನಿ ನಿರ್ಧರಿಸಿರಬಹುದು. ಇನ್ನು, ರಜನೀಕಾಂತ್ ಕನ್ನಡದಲ್ಲಿ ಡಬ್ಬಿಂಗ್ ಮಾಡಲ್ಲ ಎಂದು ಗೊತ್ತಾದ ಮೇಲೆ ಇದೀಗ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವುದು ಬೇಡ ಎಂದು ವಿತರಕರೂ ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ