Publish Date: Sat, 12 Jan 2019 (11:57 IST)
Updated Date: Sat, 12 Jan 2019 (11:58 IST)
ಬೆಂಗಳೂರು: ಸರ್ಕಾರಿ ಶಾಲೆ ಕಾಸರಗೋಡು ಎಂಬ ಮಕ್ಕಳ ಸಿನಿಮಾ ನಂತರ ಮತ್ತೆ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಎದುರು ಹರಿಕತೆ ಹೇಳುತ್ತಿದ್ದಾರೆ.
ಆದರೆ ಈ ಬಾರಿ ಶೆಟ್ರು ಬರೀ ತೆರೆ ಹಿಂದೆ ಕೆಲಸ ಮಾಡಿಲ್ಲ. ಬೆಲ್ ಬಾಟಂಗೆ ಅವರೇ ನಾಯಕರು. ಇದೇ ಮೊದಲ ಬಾರಿಗೆ ನಾಯಕರಾಗಿರುವ ರಿಷಬ್ ಶೆಟ್ಟಿಗೆ ಹರಿಪ್ರಿಯಾ ನಾಯಕಿ. ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
ಆದರೆ ಅದಕ್ಕೂ ಮೊದಲು ಬೆಲ್ ಬಾಟಂ ಹಾಡುಗಳು ಮತ್ತು ಹರಿಕತೆ ಶೈಲಿಯಲ್ಲಿ ಸಾಗಿದ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಾವಿರಾರು ಮಂದಿ ಟ್ರೈಲರ್ ವೀಕ್ಷಿಸಿ ಲೈಕ್ ಕೊಟ್ಟಿದ್ದಾರೆ. ಬರೀ ಟ್ರೈಲರೇ ಇಷ್ಟು ಸದ್ದು ಮಾಡ್ತಿದೆ. ಇನ್ನು ಸಿನಿಮಾ ಹೆಂಗಿರಬಹುದು ಎಂದು ಪ್ರೇಕ್ಷಕರು ಎದುರು ನೋಡುವಂತೆ ಮಾಡಿದೆ ಈ ಸಿನಿಮಾ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ