Publish Date: Mon, 14 Jan 2019 (09:40 IST)
Updated Date: Mon, 14 Jan 2019 (09:41 IST)
ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಬಹಳ ದಿನಗಳ ನಂತರ ಬಣ್ಣ ಹಚ್ಚಿದ ಸಿನಿಮಾ ಅಮ್ಮನ ಮನೆ. ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಬಿಡುಗಡೆ ಕಾರ್ಯಕ್ರಮದಲ್ಲಿ ರಾಘಣ್ಣ ಭಾವುಕರಾದ ಘಟನೆ ನಡೆದಿದೆ.
ವೇದಿಕೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ತಮ್ಮ ಜತೆಗಿದ್ದ ಪತ್ನಿ ಮಂಗಳಾ ಮತ್ತು ಅತ್ತೆ ನಾಗಮ್ಮ ಬಗ್ಗೆ ಹೇಳುತ್ತಾ ಭಾವುಕರಾದರು. ಅಲ್ಲದೆ, ಈ ನಡುವೆ ಪತ್ನಿ ಮಂಗಳಾ ಹಣೆಗೆ ಮುತ್ತಿಟ್ಟು, ನನಗೆ ಅನಾರೋಗ್ಯವಾಗಿದ್ದಾಗ ನನ್ನ ಅಮ್ಮನಂತೆ ನನ್ನ ನೋಡಿಕೊಂಡಿದ್ದಾಳೆ ಎಂದರು.
ಹೇಳಿ ಕೇಳಿ ಇದು ಮದರ್ ಸೆಂಟಿಮೆಂಟ್ ಸಿನಿಮಾ. ಹಾಗಾಗಿ ತಮಗೆ ಚಿಕ್ಕ ವಯಸ್ಸಿನಲ್ಲಿ ಅಮ್ಮ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾಗ ಎದೆಹಾಲು ಕೊಟ್ಟು ತಾಯಿಯಂತೆ ಬೆಳೆಸಿದ ಅತ್ತೆ ನಾಗಮ್ಮನ ಬಗ್ಗೆಯೂ ಹೇಳಿಕೊಂಡರು. ರಾಘಣ್ಣ ಮಾತು ಕೇಳಿ ಅಲ್ಲಿದ್ದವರ ಕಣ್ಣೂ ಮಂಜಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ