ಐಶ್ವರ್ಯಾ ರೈ ಎಂದರೆ ಪತಿ ಅಭಿಷೇಕ್ ಬಚ್ಚನ್ ಗೆ ಭಯವಂತೆ!

ಮಂಗಳವಾರ, 15 ಜನವರಿ 2019 (09:13 IST)
ಮುಂಬೈ: ಪತ್ನಿಗೆ ಹೆದರದ ಪತಿಯಂದಿರುವ ಈ ಕಾಲದಲ್ಲಿ ಯಾರೂ ಇಲ್ಲ. ಹಾಗಿದ್ದರೂ ನನಗೆ ಪತ್ನಿಯೆಂದರೆ ಭಯವಿಲ್ಲ ಎಂದು ತೋರಿಸಿಕೊಳ್ಳುವ ಗಂಡಸರಿಗೂ ಕಮ್ಮಿಯಿಲ್ಲ. ಇದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ರನ್ನೂ ಬಿಟ್ಟಿಲ್ಲ ನೋಡಿ!


ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ಸಹೋದರಿ ಶ್ವೇತಾ ನಂದಾ ಜತೆಗೆ ಭಾಗವಹಿಸಿದ ಅಭಿಷೇಕ್ ಬಚ್ಚನ್ ಗೆ ನೀವು ಹೆಚ್ಚು ಭಯಪಡುವುದು ಯಾರಿಗೆ? ಅಮ್ಮನಿಗಾ? ಪತ್ನಿಗಾ? ಎಂದು ಕರಣ್ ಪ್ರಶ್ನಿಸಿದ್ದರು. ಇದಕ್ಕೆ ಅಭಿಷೇಕ್ ‘ಅಮ್ಮ’ ಎಂದುತ್ತರಿಸಿದರು.

ಆದರೆ ಪಕ್ಕದಲ್ಲಿ ಕೂತಿದ್ದ ಸಹೋದರಿ ನಂದಾ ‘ಇಲ್ಲಾ ಅವನ ಪತ್ನಿಗೆ’ ಎಂದು ಅಣ್ಣನ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಆಗ ಅಭಿಷೇಕ್ ‘ನೀನು ಸುಮ್ನಿರು. ಇದು ನನ್ನ ರ್ಯಾಪಿಡ್ ಫಯರ್ ಪ್ರಶ್ನಾವಳಿ’ ಎಂದು ಸುಮ್ಮನಾಗಿಸಿದ್ದಾರೆ. ಅಸಲಿಗೆ ಅಭಿಷೇಕ್ ಗೆ ಐಶ್ವರ್ಯಾ ಎಂದರೆ ಭಯವಾ ಎಂದು ಶೋ ನೋಡಿಯೇ ತಿಳಿಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ವಾರದ ಮಜಾ ಟಾಕೀಸ್ ಈ ಕಾರಣಕ್ಕೆ ನೋಡಲೇಬೇಕು!