ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿದ್ದು ಸರಿಯಲ್ಲ: ಕಾಫಿ ವಿತ್ ಶೋ ವಿವಾದದ ಬಗ್ಗೆ ಕೊಹ್ಲಿ ಮಾತು

ಶನಿವಾರ, 12 ಜನವರಿ 2019 (09:21 IST)
ಸಿಡ್ನಿ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಪತ್ರಕರ್ತರು ಹಾರ್ದಿಕ್ ಪಾಂಡ್ಯ ವಿವಾದದ ಬಗ್ಗೆ ಪ್ರಶ್ನಿಸಿದಾಗ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ಭಾರತೀಯ ಕ್ರಿಕೆಟ್ ತಂಡ ಖಂಡಿತಾ ಇಂತಹ ಕಾಮೆಂಟ್ ಗಳನ್ನು ಪ್ರೋತ್ಸಾಹಿಸುವುದಿಲ್ಲ. ಒಬ್ಬ ಜವಾಬ್ಧಾರಿಯುತ ಕ್ರಿಕೆಟಿಗರಾಗಿ ನಾವು ಸಾರ್ವಜನಿಕ ವೇದಿಕೆಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಹೇಳಿಕೆಗಳನ್ನು ನಾವು ಬೆಂಬಲಿಸುವುದಿಲ್ಲ. ಈ ಕಾಮೆಂಟ್ ಮಾಡಿದ ಕ್ರಿಕೆಟಿಗರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ಅಷ್ಟೇ ಅಲ್ಲ ಇಬ್ಬರೂ ಕ್ರಿಕೆಟಿಗರನ್ನು ಎರಡು ಪಂದ್ಯಗಳಿಗೆ ನಿಷೇಧಿಸುವ ಕುರಿತು ಬಿಸಿಸಿಐ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ಆದರೆ ಇವೆಲ್ಲಾ ವೈಯಕ್ತಿಕ ಅಭಿಪ್ರಾಯಗಳು. ತಂಡದ ಮೇಲೆ ಇದು ಪರಿಣಾಮ ಬೀರದು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಣಜಿ ಟ್ರೋಫಿ: ಅದೃಷ್ಟದ ಬಲದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಕರ್ನಾಟಕ