Publish Date: Fri, 11 Jan 2019 (09:42 IST)
Updated Date: Fri, 11 Jan 2019 (09:44 IST)
ಬೆಂಗಳೂರು: ಈ ಬಾರಿ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಬರೋಡಾ ವಿರುದ್ಧ ಸೋಲನುಭವಿಸಿದರೂ ಕ್ವಾರ್ಟರ್ ಫೈನಲ್ ಗೇರುವಲ್ಲಿ ಯಶಸ್ವಿಯಾಗಿದೆ.
ಮಧ್ಯಪ್ರದೇಶ ಆಂಧ್ರದ ವಿರುದ್ಧ ಬಂಗಾಳ ಪಂಜಾಬ್ ವಿರುದ್ಧ ಮತ್ತು ಹಿಮಾಚಲ ಪ್ರದೇಶ ಕೇರಳ ವಿರುದ್ಧ ಹೀನಾಯ ಸೋಲುನುಭವಿಸಿದ್ದರಿಂದ ಕರ್ನಾಟಕ ಹಿಂದಿನ ಪಂದ್ಯಗಳಿಂದ ಸಂಪಾದಿಸಿದ ಅಂಕದ ಆಧಾರದಲ್ಲಿ ಕ್ವಾರ್ಟರ್ ಫೈನಲ್ ಘಟ್ಟಕ್ಕೆ ತಲುಪಿದೆ. ಸದ್ಯಕ್ಕೆ ಕರ್ನಾಟಕ 27 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಜನವರಿ 15 ರಿಂದ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದ್ದು, ಎ ಗುಂಪಿನ ಕರ್ನಾಟಕ ಸಿ ಗುಂಪಿನಲ್ಲಿರುವ ರಾಜಸ್ಥಾನದ ವಿರುದ್ಧ ಸೆಣಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ