Publish Date: Fri, 11 Jan 2019 (09:18 IST)
Updated Date: Fri, 11 Jan 2019 (09:19 IST)
ಮುಂಬೈ: ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಮತ್ತು ಅವರಿಗೆ ಸಾಥ್ ನೀಡಿದ ಕೆಎಲ್ ರಾಹುಲ್ ಗೆ ಪಂದ್ಯದಿಂದ ನಿಷೇಧ ಶಿಕ್ಷೆ ವಿಧಿಸುವ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ.
ಈ ಬಗ್ಗೆ ಬಿಸಿಸಿಐ ಬಿಸಿಸಿಐ ಆಡಳಿತ ಮಂಡಳಿ ಸದಸ್ಯೆ ಡಿಯಾನ ಎಡುಲ್ಜಿ ಕ್ರಿಕೆಟಿಗರಿಗೆ ನಿಷೇಧದ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ ಬೆನ್ನಲ್ಲೇ ಮುಖ್ಯಸ್ಥ ವಿನೋದ್ ರಾಯ್ ಕೂಡಾ 2 ಪಂದ್ಯಗಳ ನಿಷೇಧ ವಿಧಿಸಲು ಶಿಫಾರಸ್ಸು ಮಾಡಿದ್ದಾರೆ.
ಈ ಬಗ್ಗೆ ಇದೀಗ ಬಿಸಿಸಿಐ ಅಧಿಕಾರಿಗಳು ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದು, ಅದಾದ ಬಳಿಕ ಕ್ರಿಕೆಟಿಗರ ಹಣೆಬರಹ ನಿರ್ಧಾರವಾಗಲಿದೆ. ಒಂದು ವೇಳೆ ಎರಡು ಪಂದ್ಯಗಳ ನಿಷೇಧ ಜಾರಿಯಾದರೆ ರಾಹುಲ್ ಮತ್ತು ಪಾಂಡ್ಯ ಆಸೀಸ್ ವಿರುದ್ಧ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಬೇಕಾದೀತು.
ಇಬ್ಬರಿಗೂ ಬಿಸಿಸಿಐ ವಿವರಣೆ ಕೋರಿ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ಈ ನಡುವೆ ಹಾರ್ದಿಕ್ ತಮ್ಮ ಕಾಮೆಂಟ್ ಗೆ ಕ್ಷಮೆ ಯಾಚಿಸಿದ್ದಾರೆ. ಆದರೆ ಆ ಶೋನಲ್ಲಿ ಹಾರ್ದಿಕ್ ಗೆ ಜತೆಯಾಗಿದ್ದ ರಾಹುಲ್ ಇದುವರೆಗೆ ಈ ಕುರಿತು ಪ್ರತಿಕ್ರಿಯಿಸಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ