ಹೀಗೆ ಮಾಡಿದ್ರೆ ಏಕದಿನದಲ್ಲೂ ಟೀಂ ಇಂಡಿಯಾವೇ ನಂ.1

ಗುರುವಾರ, 10 ಜನವರಿ 2019 (09:29 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು, ನಂ.1 ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಿರುವ ಟೀಂ ಇಂಡಿಯಾ ಇದೀಗ ಏಕದಿನದಲ್ಲೂ ನಂ.1 ಆಗುವ ಅವಕಾಶ ಪಡೆದಿದೆ.


ಸದ್ಯಕ್ಕೆ ಇಂಗ್ಲೆಂಡ್ 126 ಅಂಕಗಳೊಂದಿಗೆ ಏಕದಿನ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನ ಪಡೆದಿದೆ. ಭಾರತ 121 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಇದೀಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ನಂತರ ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳಿವೆ. ಈ ಎರಡೂ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೆ ಟೀಂ ಇಂಡಿಯಾ ಅಂಕ 125 ಕ್ಕೆ ಏರಲಿದೆ. ಇದರೊಂದಿಗೆ ಭಾರತಕ್ಕೆ ನಂ.1 ಏಕದಿನ ತಂಡವಾಗುವ ಅವಕಾಶ ಇನ್ನಷ್ಟು ಸುಲಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಸ್ಟ್ರೇಲಿಯಾ ಬಾಲಕನಿಗೆ ಫಿದಾ ಆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ