Select Your Language

Notifications

webdunia
webdunia
webdunia
webdunia

ಜಸ್ಪ್ರೀತ್ ಬುಮ್ರಾಗೆ ಈಗ್ಯಾಕೆ ವಿಶ್ರಾಂತಿ ನೀಡಬೇಕಿತ್ತು? ಅಭಿಮಾನಿಗಳು ಫುಲ್ ಗರಂ

ಜಸ್ಪ್ರೀತ್ ಬುಮ್ರಾ
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಗೆ ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಬಿಸಿಸಿಐ ಕ್ರಮಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.


ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬುಮ್ರಾಗೆ ವಿಶ್ವಕಪ್ ಗೆ ಮೊದಲು ವಿಶ್ರಾಂತಿ ನೀಡಬೇಕಿದ್ದರೆ ಐಪಿಎಲ್ ನಿಂದ ಹೊರಗುಳಿಯಬಹುದಿತ್ತು. ಅದು ಬಿಟ್ಟು ಆಸ್ಟ್ರೇಲಿಯಾದಂತಹ ಪ್ರಮುಖ ಸರಣಿಗೆ ವಿಶ್ರಾಂತಿ ನೀಡುವ ಅಗತ್ಯವೇನಿತ್ತು ಎಂಬು ಅಭಿಮಾನಿಗಳು ಕಿಡಿ ಕಾರಿದ್ದಾರೆ.

ವಿಶ್ವಕಪ್ ಗೆ ಪ್ರಮುಖ ವೇಗಿಗಳಿಗೆ ವಿಶ್ರಾಂತಿ ಸಿಗಲು ಐಪಿಎಲ್ ನಿಂದ ಹೊರಗುಳಿಯಬಹುದು ಎಂದು ಈ ಮೊದಲು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅದರ ಬೆನ್ನಲ್ಲೇ ಬುಮ್ರಾ ಕೂಡಾ ಐಪಿಎಲ್ ನಿಂದ ಹೊರಗುಳಿಯಲು ತಮ್ಮ ತಂಡದ ಜತೆ ಮಾತುಕತೆ ನಡೆಸಲು ಚಿಂತನೆ ನಡೆಸಿದ್ದರು. ಅದರ ಬೆನ್ನಲ್ಲೇ ಬುಮ್ರಾಗೆ ಆಸ್ಟ್ರೇಲಿಯಾ ಸರಣಿಯಿಂದ ವಿಶ್ರಾಂತಿ ನೀಡಿರುವುದರ ಹಿಂದೆ ಐಪಿಎಲ್ ಫ್ರಾಂಚೈಸಿಯ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಯಾವಾಗಿಂದ ಎನ್ನುವ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ