ಆಸ್ಟ್ರೇಲಿಯಾ ಬಾಲಕನಿಗೆ ಫಿದಾ ಆದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ

ಗುರುವಾರ, 10 ಜನವರಿ 2019 (09:26 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಇದೀಗ ಆಸ್ಟ್ರೇಲಿಯನ್ನರ ಮನಗೆದ್ದಿದೆ.


ಬುಮ್ರಾ ಬೌಲಿಂಗ್ ಮೋಡಿಗೆ ಎಷ್ಟು ಜನ ಮರುಳಾಗಿದ್ದಾರೆಂದರೆ ಆಸ್ಟ್ರೇಲಿಯಾದ ಪುಟಾಣಿ ಬಾಲಕನೊಬ್ಬ ಅವರನ್ನೇ ಅನುಕರಿಸುವಷ್ಟು. ಬುಮ್ರಾ ಬಾಲ್‍ ಎಸೆಯುವ ವಿಶಿಷ್ಟ ಶೈಲಿಯನ್ನು ಅನುಕರಿಸುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ಈ ಪುಟಾಣಿ ಪೋರ ಬುಮ್ರಾ ಶೈಲಿಯನ್ನೇ ಅನುಕರಿಸಿ ಅವರಿಂದಲೇ ಮೆಚ್ಚುಗೆ ಪಡೆದಿದ್ದಾನೆ.

ಟ್ವಿಟರ್ ಮೂಲಕ ಒಬ್ಬರು ಪುಟಾಣಿ ಬೌಲಿಂಗ್ ಮಾಡುವ ವಿಡಿಯೋ ಪ್ರಕಟಿಸಿದ್ದು, ಇದನ್ನು ನೋಡಿ ಬುಮ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಎಷ್ಟು ಕ್ಯೂಟ್ ಆಗಿ ಬಾಲ್ ಮಾಡುತ್ತಾನೆ ಈ ಪುಟಾಣಿ. ಇವನಿಗೆ ನನ್ನ ಶುಭ ಹಾರೈಕೆ ತಿಳಿಸಿ ಎಂದು ಬುಮ್ರಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆ, ಸೆಕ್ಸ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಗೆ ನೋಟಿಸ್